Mon. Dec 23rd, 2024

9.16 ಕೋಟಿ ಆಸೆಗೆ 65.76 ಲಕ್ಷ ರೂ ಕಳೆದುಕೊಂಡ ವೃದ್ಧೆ

Share this with Friends

ಮೈಸೂರು,ಫೆ.9: ಮೋಸ ಹೋಗೋರು ಇರೋತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ,ಇದಕ್ಕೆ ಮೈಸೂರಿನಲ್ಲಿ ಉದಾಹರಣೆ ಇದೆ.

ವೃದ್ಧೆಯೊಬ್ಬರು 9.16 ಕೋಟಿ ಆಸೆಗೆ ಮರುಳಾಗಿ 65.76 ಲಕ್ಷ ಕಳೆದುಕೊಂಡ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

ಬೋಗಾದಿ ನಿವಾಸಿ ಗೀತಾ ನಾಯರ್ (65) ಹಣ ಕಳೆದುಕೊಂಡ ವೃದ್ದೆ.

9,16,98,663 ರೂ ಗೂಗಲ್ ಅವಾರ್ಡ್ ಬಂದಿದೆ, ಇದನ್ನ ಪಡೆದುಕೊಳ್ಳಲು ಸ್ವಲ್ಪ ಚಾರ್ಜಸ್ ಕಟ್ಟಬೇಕು ಎಂಬ ಮೆಸೇಜ್ ಬಂದಿದೆ.

ಇದನ್ನು ನಂಬಿದ ಗೀತಾ ನಾಯರ್ ಹಂತ,ಹಂತವಾಗಿ 65,72,376 ರೂ ಪಾವತಿಸಿದ್ದಾರೆ.

ಮತ್ತಷ್ಟು ಹಣ ಪಾವತಿಸುವಂತೆ ಹೇಳಿದಾಗ ಅನುಮಾನಗೊಂಡು ಆಕೆ ಹಣ ಕಳುಹಿಸುವುದನ್ನ ನಿಲ್ಲಿಸಿದ್ದಾರೆ.

ತಾವು ವಂಚನೆಗೆ ಒಳಗಾಗಿರುವುದು ತಿಳಿದು ತಕ್ಷಣ ಗೀತಾ ನಾಯರ್
ಪೊಲೀಸರಿಗೆ ದೂರು ನೀಡಿದ್ದಾರೆ.

ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ವ್ಯಾಟ್ಸಪ್ ಗಳಲ್ಲಿ ಬರುವ ಮೆಸೇಜ್ ಗಳನ್ನು ನಂಬಿ ಮೋಸ ಹೋಗಬಾರದೆಂದು‌ ಪೊಲೀಸ್ ಅಧಿಕಾರಿಗಳು ತಿಳುವಳಿಕೆ ನೀಡಿದ್ದಾರೆ.


Share this with Friends

Related Post