Mon. Dec 23rd, 2024

ಸೈನಿಕ್ ಅಕಾಡೆಮಿ ವತಿಯಿಂದಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ

Share this with Friends

ಮೈಸೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸೈನಿಕ್ ಅಕಾಡೆಮಿ ವತಿಯಿಂದ ಹೂಟಗಳ್ಳಿ ಮತ್ತು ಬೆಳವಾಡಿ ನಗರದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಇದೇ ವೇಳೆ ಪ್ರಾಮಾಣಿಕ ಮತ್ತು ಶ್ರಮಜೀವಿಗಳು ಎಂದು ಹೂಟಗಳ್ಳಿ ನಗರಸಭೆ ಗುರುತಿಸಿರುವ ಪೌರಕಾರ್ಮಿಕರಾದ ಮಹದೇವ್. ಆರ್, ಕಮಲಮ್ಮ ಮತ್ತು ಅಶೋಕ ರವರನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಮಾಜಿ ಕಮಾಂಡೋ ಶ್ರೀಧರ್ ಸಿ.ಎಂ, ಒಬ್ಬ ಕಸಗುಡಿಸುವ ವ್ಯಕ್ತಿಯಿಂದ ಹಿಡಿದು ದೊಡ್ಡ ಮಟ್ಟದ ಅಧಿಕಾರಿಗಳವರೆಗೂ ಕಾರ್ಮಿಕರೇ ಆಗಿರುತ್ತಾರೆ ಎಂದು ಹೇಳಿದರು.

ಕಾರ್ಮಿಕರಿಲ್ಲದೆ ಯಾವುದೇ ಅಭಿವೃದ್ಧಿ, ಬೆಳವಣಿಗೆ ಇರುವುದಿಲ್ಲ, ಎಲ್ಲಾ ಕಾರ್ಮಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ, ಅದರಲ್ಲೂ ಈ ತರಹ ವರ್ಷವಿಡೀ ಸ್ವಚ್ಛ ಗೊಳಿಸುವ ಪೌರಕಾರ್ಮಿಕರನ್ನೂ ಗೌರವಿಸಬೇಕು ಎಂದು ತಿಳಿಸಿದರು

ಸೈನಿಕ ಅಕಾಡೆಮಿ ಮೈಸೂರಿನ ಸಹ ಸಂಸ್ಥಾಪಕಿ ಅನಿತಾ ಶ್ರೀಧರ್, ಅಧ್ಯಾಪಕರಾದ ಕೆ. ವಿಜಯ್ ಕುಮಾರ್, ಸುನೀತಾ, ಹೂಟಗಳ್ಳಿ ನಗರ ಸಭೆಯ ಹೆಲ್ತ್ ಇನ್ಸ್ಪೆಕ್ಟರ್ ಅನಿಶ್ ಮತ್ತು ಸಿಬ್ಬಂದಿ, ಪೌರಕಾರ್ಮಿಕರು ಮತ್ತು ಸೈನಿಕ ಅಕಾಡೆಮಿ ಮೈಸೂರಿನ ಸಿಬ್ಬಂದಿ,ತರಬೇತಿ ಪಡೆಯುತ್ತಿರುವ ಭಾವಿ ಸೈನಿಕರು ಉಪಸ್ಥಿತರಿದ್ದರು.


Share this with Friends

Related Post