Mon. Dec 23rd, 2024

ಪ್ರಜ್ವಲ್ ರೇವಣ್ಣ ಪ್ರಕರಣ: ದೌರ್ಜನ್ಯಕ್ಕೆ ಒಳಗಾದ ಮಹಿಳೆ ಅಪಹರಣ

Share this with Friends

ಮೈಸೂರು,ಮೇ.3: ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ‌ ಎನ್ನಲಾದ
ಮಹಿಳೆಯನ್ನು ಅಪಹರಣ ಮಾಡಲಾಗಿದೆ.

ಈ ಕುರಿತು ಸ್ವತಃ ಮಹಿಳೆಯ ಪುತ್ರ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ
ತಮ್ಮ ತಾಯಿಯ ಅಪಹರಣವಾಗಿದೆ ಎಂದು
ದೂರು ನೀಡಿದ್ದಾರೆ.

ಅಪಹರಣಕ್ಕೆ ಒಳಗಾದ ಮಹಿಳೆ ಮೈಸೂರಿನ ಹೆಬ್ಬಾಳ್ ಬಡಾವಣೆ ನಿವಾಸಿ,ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಫೋಟೋಗಳು ಬಹಿರಂಗ ಆದ ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ ಎಂದು ಪುತ್ರ ದೂರಿದ್ದಾರೆ.

ಶಾಸಕ ಎಚ್.ಡಿ.ರೇವಣ್ಣ,ಅವರ ಪತ್ನಿ ಭವಾನಿ ರೇವಣ್ಣ ಅವರ ಸೂಚನೆ ಮೇರೆಗೆ ಸತೀಶ್ ಬಾಬು ಎಂಬುವರು ತಾಯಿಯನ್ನು ಕರದೊಯ್ದಿದ್ದಾರೆ ಎಂದು ದೂರಿನಲ್ಲಿ ಪುತ್ರ ತಿಳಿಸಿದ್ದಾರೆ.

ಮಹಿಳೆಯ ಪುತ್ರ ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆಯ ಪತ್ತೆ ಹಚ್ಚಿ ಕರೆ ತರಲು ಶೋಧಕಾರ್ಯ ಕೈಗೊಂಡಿದ್ದಾರೆ.


Share this with Friends

Related Post