ಮೈಸೂರು, ಮೇ.4: ಕಾವೇರಿ ಕ್ರಿಯಾ ಸಮಿತಿಯು ಧರಣಿ ಸತ್ಯಾಗ್ರಹ ಹಾಗೂ ಸಹಿ ಸಂಗ್ರಹ ಕಾರ್ಯವನ್ನು ವಾರಕ್ಕೆ ಒಂದು ದಿನ ನಡೆಸುತ್ತಾ ಬಂದಿದ್ದು ಟೌನ್ ಹಾಲ್ ಮುಂಬಾಗ ಇಂದೂ ಕೂಡಾ ಮುಂದುವರೆಸಿತು.
ಇಂದು ಕೂಡಾ ಸಹಸ್ರಾರು ಜನ ಕಾವೇರಿ ನೀರಿನ ವಿಚಾರವಾಗಿ ನಮ್ಮ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಸಹಿ ಹಾಕಿದರು.
ಈ ವೇಳೆ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯ ಪ್ರಕಾಶ್ ಅವರು ಮಾತನಾಡಿ ತಮಿಳುನಾಡು ಸರ್ಕಾರ ಅಲ್ಲಿನ ಜಲಾಶಯಗಳಲ್ಲಿ ನೀರಿದ್ದರೂ ಮತ್ತೆ ನಿಉರಿಗಾಗಿ ಕಾವೇರಿ ನ್ಯಾಯ ಮಂಡಳಿ ಮುಂದೆ ಪಟ್ಟು ಹಿಡಿದಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.
ನಾವು ಭಾರತ ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿದ್ದು, ನೆರೆ ಹೊರೆಯ ರಾಜ್ಯಗಳು ಅಣ್ಣ-ತಮ್ಮಂದಿರಂತಿರಬೇಕು. ತಮಿಳುನಾಡಿನವರು ನಮ್ಮ ನಾಡಿನಲ್ಲಿ ಕುಡಿಯಲೇ ನೀರು ಇಲ್ಲದಿದ್ದರೂ ನೀರು ಬಿಡಿ ಎಂದು ದಬ್ಬಾಳಿಕೆ ಮಾಡುತ್ತಿರುವುದು ನಿಜಕ್ಕೂ ಖಂಡನೀಯ ಎಂದು ತಿಳಿಸಿದರು.
ಕೂಡಲೇ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ನಮ್ಮ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರವಾಗಿ ಶಾಶ್ವತವಾದ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಇಂದಿನ ಸಹಿ ಸಂಗ್ರಹ ದಲ್ಲಿ ತೇಜೇಶ್ ಲೋಕೇಶ್ ಗೌಡ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಸೋಮೇಗೌಡ , ರಾಜಶೇಖರ್, ಹೊನ್ನೇಗೌಡ ,ಆಟೋ ಮಹಾದೇವ, ಅಶೋಕ್, ಹನುಮಂತೇಗೌಡ, ನಾಗರಾಜ್, ರವೀಶ್ , ಕೃಷ್ಣಪ್ಪ, ಪ್ರಭುಶಂಕರ, ಹನುಮಂತಯ್ಯ ,ಪ್ರಭಾಕರ, ಪುಷ್ಪವತಿ , ಬಾಲು, ಭಾಗ್ಯಮ್ಮ ಮತ್ತಿತರರು ಭಾಗವಹಿಸಿದ್ದರು.