ಮಂಡ್ಯ,ಫೆ.9: ಹನುಮ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ ಕೆರಗೋಡು ಬಂದ್ ಯಶಸ್ವಿಯಾಗಿದ್ದರೆ ಮಂಡ್ಯದಲ್ಲಿ ನೀರಸವಾಗಿದೆ
ಕೆರಗೋಡಿನಲ್ಲಿ ಬಂದ್ ವೇಳೆ ವರ್ತಕರು, ಹೊಟೇಲ್ ಮಾಲೀಕರು,ಅಂಗಡಿ, ಹೋಟೆಲ್‌ಗಳು ಮುಚ್ಚಿದ್ದವು.
ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಕೆರಗೋಡಿನಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕೆರಗೋಡಿನಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬೈಕ್ ರ್‍ಯಾಲಿ ಹಮ್ಮಿಕೊಂಡಿದ್ದರು.
ಗ್ರಾಮಕ್ಕೆ ಎಎಸ್ಪಿ ತಿಮ್ಮಯ್ಯ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು. ಯಾರೇ ಆಗಿರಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸಿದರೆ ಕ್ರಮ ಜರುಗಿಸಿ ಎಂದು ಸೂಚಿಸಿದರು
ವಿವಾದ ಉಂಟು ಮಾಡಿದ್ದ ಧ್ವಜಸ್ತಂಭದ ಬಳಿ ಅತಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಮಂಡ್ಯದಲ್ಲಿ ಬಂದ್ ಬಿಸಿ ಅಷ್ಟಾಗಿ ತಟ್ಟಲಿಲ್ಲ.ಕೆಲವೇ ವರ್ತಕರು ಅಂಗಡಿ ಮುಚ್ಚಿದ್ದರೆ ಬಹುತೇಕ ಎಲ್ಲಾ ತೆರೆದಿದ್ದವು,ಸಾರ್ವಜನಿಕರಿಗೆ ತೊಂದರೆ ಆಗಲಿಲ್ಲ.
ಬೈಕ್ ರ್‍ಯಾಲಿ ವೇಳೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.
ಹನುಮಧ್ವಜ ತೆರವು ಮಾಡುವಲ್ಲಿ ಶಾಸಕರ ಪಾತ್ರ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಮನೆಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.