ಬೆಂಗಳೂರು, ಮೇ.6: ಬದಲಾಗು ಮತದಾರ ಎಂಬ ಗೀತೆ ನಿಜಕ್ಕೂ ಬಹಳ,ಬಹಳ ಅರ್ಥಗರ್ಭಿತವಾಗಿದೆ.
ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಈ ಹಾಡಿಗೆ ಸಾಹಿತ್ಯ ಬರೆದಿರುವರು ಮಹೇಶ್ ಬೆಂಗಳೂರು,ಸಂಗೀತ ನಿರ್ದೇಶಕರು
ದೇವೇಂದ್ರ ಕುಮಾರ್, ವೀಣಾ ಮತ್ತು ಅಭಿಶ್ರೀ.
ಇವರುಗಳು ಈ ಗೀತೆಯನ್ನು ರಚಿಸಿ ಹಾಡಿ ದೇಶದ ಮತದಾರರಲ್ಲಿ ಜಾಗೃತಿ ಮೂಡಿಸಿದ್ದಾರೆ.ಏಪ್ರಿಲ್ ನಲ್ಲಿ ಬಿಡುಗಡೆಯಾದ ಬದಲಾಗು ಮತದಾರ ದಕ್ಷಿಣ ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಮತದಾರರ ಮನ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
ಈಗ ಉತ್ತರ ಕರ್ನಾಟಕದ ಚುನಾವಣೆ ಇದೆ.ಚುನಾವಣೆ ಮುಂಚೆ ಅಲ್ಲಿನ ಎಲ್ಲಾ ನಾಗರೀಕರು ಈ ಹಾಡನ್ನು ವೀಡಿಯೋ ಮೂಲಕ ಕೇಳಬೇಕಿದೆ.
ಮತದಾನವು ನಮ್ಮ ದೇಶದ ಭವಿಷ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಪ್ರಮುಖ ನಾಗರಿಕ ಕರ್ತವ್ಯವಾಗಿದೆ.
ಮಹೇಶ್ ಬೆಂಗಳೂರು ಅವರು ರಚಿಸಿರುವ ಬದಲಾಗು ಮತದಾರ ಸಾಹಿತ್ಯ ಬಹಳ ಅರ್ಥಗರ್ಭಿತವಾಗಿದೆ. ಯಾವುದೇ ಆಸೆ, ಆಮೇಷಗಳಿಗೆ ಬಲಿಯಾಗದೆ ದೇಶದ ಹಿತವನ್ನು ಕಾಯುವ ಒಳ್ಳೆಯ ಪ್ರಜೆಯನ್ನು ಆಯ್ಕೆ ಮಾಡಿ ಮತವನ್ನು ನೀಡು ಮತದಾರ ಎಂಬ ಸಂದೇಶವನ್ನು ಈ ಹಾಡಿನ ಮೂಲಕ ಸಾರಿದ್ದಾರೆ.
ಮತದಾನ ಮಾಡಲು ಸಮಾನ ಅವಕಾಶವಿರುತ್ತದೆ. ಮತದಾನ ಎನ್ನುವುದು ಕೇವಲ ನಮ್ಮ ಹಕ್ಕು ಜತೆಗೆ ನಮ್ಮ ಶಕ್ತಿ. ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳ ಗುಣ, ನಡತೆ, ಚಾರಿತ್ರ್ಯ, ವಿದ್ಯಾಬ್ಯಾಸ, ಸಾಮಾಜಿಕ ಕಳಕಳಿ, ದೇಶಭಕ್ತಿ ಮತ್ತು ಸಹಭಾಗಿತ್ವ ಇವೆಲ್ಲವನ್ನೂ ಅಳೆದು ತೂಗಿ, ಆತನಿಂದ ದೇಶಕ್ಕೆ ಏನಾದರೂ ಸಹಾಯ ಆಗಬಹುದಾ ಎಂಬುದನ್ನು ವಿಮರ್ಶಿಸಿ ಮತದಾನ ಮಾಡಬೇಕು ಯಾರೇ ಆಗಲಿ ಮತವನ್ನು ಮಾರಾಟ ಮಾಡಿಕೊಳ್ಳಬೇಡಿ ಎಂದು ತಿಳಿಹೇಳಿದ್ದಾರೆ.
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಪ್ರಜೆಗಳು ಮತದಾನದ ಮುಖಾಂತರ ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ, ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಮಂಡಿಸಲು ಅವಕಾಶವಿದೆ.
ವಿಡಿಯೋಗೆ ಮೇಲಿನ ಲಿಂಕ್ ಒತ್ತಿ
ನಾವು ನಂಬಿದ ತತ್ವ, ಆದರ್ಶ ಮತ್ತು ದೃಷ್ಟಿಕೋನಗಳಿಗೆ ಗೌರವ ನೀಡುವ ವ್ಯಕ್ತಿಯನ್ನು ಆರಿಸುವ ಹಕ್ಕು ಮತದಾರರಿಗೆ ಇರುತ್ತದೆ, ಪ್ರಜಾಪ್ರಭುತ್ವದ ಪ್ರತಿಯೊಂದು ಮತವೂ ಅತ್ಯಮೂಲ್ಯ,ಹಾಗಾಗಿ ಎಲ್ಲ ನಾಗರಿಕರು ಹಣ ಅಥವಾ ವಸ್ತುಗಳ ಆಮೇಷಗಳಿಗೆ ಬಲಿಯಾಗದೆ ಅಮೂಲ್ಯವಾದ ಮತವನ್ನು ಯೋಗ್ಯ ಅಭ್ಯರ್ಥಿಗೆ ನೀಡಬೇಕೆಂಬ ಆಶಯವನ್ನು ಈ ಗೀತೆಯಲ್ಲಿ ಮಹೇಶ್ ಅವರು ಅರ್ಥಪೂರ್ಣವಾಗಿ ನೀಡಿದ್ದಾರೆ.