Fri. Nov 1st, 2024

ಮನೆ ಕೆಲಸದಾಕೆ ಕಿಡ್ನಾಪ್ ಪ್ರಕರಣ:ಸತೀಶ್ ಬಾಬು ಮೇ 13 ರವರೆಗೆ ಕಸ್ಟಡಿಗೆ

Share this with Friends

ಬೆಂಗಳೂರು,ಮೇ.6: ಮನೆಕೆಲಸದಾಕೆ ಕಿಡ್ನಾಪ್ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಂಧನ ಬೆನ್ನಲ್ಲೇ ಎ2 ಆರೋಪಿ ಸತೀಶ್ ಬಾಬು ಬಂಧನವಾಗಿದೆ.

ಸತೀಶ್ ಬಾಬು ನನ್ನು (ಬಾಬಣ್ಣ)ಎಸ್‍ಐಟಿ ಅಧಿಕಾರಿಗಳು ಮೇ 13 ರವರೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಅಪಹರಣ ಪ್ರಕರಣ ಸಂಬಂಧ ಇಂದು ಎಸ್ಐಟಿ ಅಧಿಕಾರಿಗಳು ನ್ಯಾ ರವೀಂದ್ರಕುಮಾರ್ ಕಟ್ಟಿಮನಿ ಅವರ ಮುಂದೆ ಹಾಜರುಪಡಿಸಿದರು.

ಸತೀಶ್ ಪರ ವಕೀಲರು, ಎಸ್‍ಐಟಿ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ಮಾಹಿತಿ ನೀಡದೇ ಪ್ರಕರಣ ವರ್ಗಾವಣೆ ಮಾಡಿದ್ದಾರೆ. ತಕ್ಷಣ ಅಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಕೆಲವು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸ್ ಕಸ್ಟಡಿಗೆ ಆಕ್ಷೇಪಣೆ ಮಾಡಿದರು.

ಎಸ್‍ಐಟಿ ಪರ ವಕೀಲರು, ಪ್ರಕರಣ ತುಂಬಾ ದೊಡ್ಡದಿದೆ. ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಹೀಗಾಗಿ 10 ದಿನ ಕಸ್ಟಡಿಗೆ ಬೇಕು. ಈತನೇ ಪ್ರಕರಣಕ್ಕೆ ಮುಖ್ಯವಾದ ವ್ಯಕ್ತಿ, ಅಪಹರಣಕ್ಕೆ ಒಳಗಾದ ಮಹಿಳೆಯನ್ನು ಕೆ ಆರ್ ನಗರ ಹೊಳೆನರಸೀಪುರ ಎಲ್ಲಾ ಕಡೆ ಸುತ್ತಾಡಿಸಿದ್ದಾನೆ.

ಈತನೇ ಮಹಿಳೆಯನ್ನು ಕರೆಕೊಂಡು ಹೋಗಿದ್ದಾನೆ,ಮೊದಲ ಆರೋಪಿ ಜೊತೆ ಬಿಟ್ಟಿದ್ದಾನೆ, ಅಲ್ಲದೇ ಮೊದಲು ಆರೋಪಿ ಪತ್ನಿಯ ಬಳಿಯೂ ಮಾತನಾಡಿಸಿದ್ದಾನೆ. ಕಿಡ್ನಾಪ್‍ನಲ್ಲಿ ಪಾತ್ರ ಯಾರದ್ದು ಇದೆ ಎಂಬ ಸ್ಪಷ್ಟತೆ ಬೇಕಾಗಿದೆ. ಹೀಗಾಗಿ ಇವರ ಬಳಿ ಮಾಹಿತಿ ಬೇಕು ಎಂದು ತಿಳಿಸಿದ್ದಾರೆ.

ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಸತೀಶ್ ಬಾಬು ಅವರನ್ನು 8 ದಿನಗಳ ಕಾಲ ಎಸ್‍ಐಟಿ ವಶಕ್ಕೆ ಒಪ್ಪಿಸಿದರು.


Share this with Friends

Related Post