Fri. Nov 1st, 2024

ಸಂತ್ರಸ್ತ ಮಹಿಳೆಯನ್ನು ಎಲ್ಲಿಗೆ ಕರೆದು ಕೊಂಡು ಹೋಗಿದ್ದೀರಿ:ಸಾರಾ ಮಹೇಶ್ ಪ್ರಶ್ನೆ

Share this with Friends

ಮೈಸೂರು,ಮೇ.7: ಕಿಡ್ನಾಪ್ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಇದುವರೆಗೆ ಏಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ ಎಂದು ಜೆಡಿಎಸ್ ಮುಖಂಡ ಸಾರಾ ಮಹೇಶ್ ಕಾರವಾಗಿ ಪ್ರಶ್ನಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ಆ ಸಂತ್ರಸ್ತ ಮಹಿಳೆಯನ್ನು ಎಲ್ಲಿಗೆ ಕರೆದು ಕೊಂಡು ಹೋಗಿದ್ದಿರಾ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.

ಎಸ್ ಐ ಟಿ ಅಧಿಕಾರಿಗಳನ್ನು ಇಟ್ಟುಕೊಂಡು ನಮ್ಮ ನಾಯಕರನ್ನು ಹೆದರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ,ಪೆನ್ ಡ್ರೈವ್ ಹಂಚಿದವರನ್ನು ಯಾಕೆ ಇನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸಿದರು

ರಾಜಗೋಪಾಲ್ ತೋಟದಿಂದ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿಲ್ಲ,ರೇವಣ್ಣ ವಿರುದ್ದ ಕೆ.ಆರ್. ನಗರದಲ್ಲಿ ಕೇಸು ದಾಖಲಾಗುವುದಕ್ಕೆ ಮೊದಲೇ ಮಾಧ್ಯಮಗಳಿಗೆ ಹೇಗೆ ಗೊತ್ತಾಯ್ತು ಎಂದು ತರಾಟೆಗೆ ತೆಗೆದುಕೊಂಡರು.

ತೋಟದಲ್ಲಿ ಆ ಮಹಿಳೆ ಇದ್ದರು ಎಂಬುದರ ಒಂದು ವೀಡಿಯೋ ಬಂದಿಲ್ಲ,ಆ ಮಹಿಳೆ ತೋಟದಲ್ಲಿ ಸಿಕ್ಕಿಲ್ಲ,ಹುಣಸೂರಿನ
ಕರಿಗೌಡ ರಸ್ತೆಯಲ್ಲಿ ಪವಿತ್ರ ಹರೀಶ್ ಅವರ ಮನೆಯಿಂದ ಸಂತ್ರಸ್ತ ಮಹಿಳೆಯನ್ನು ಪೊಲೀಸರು ಕರೆದು ಕೊಂಡು ಹೋಗಿದ್ದಾರೆ,
ಪವಿತ್ರ ಹರೀಶ್, ಸಂತ್ರಸ್ತೆ ಮಹಿಳೆ ಸಂಬಂಧಿ ಎಂದು ಸ್ಪೋಟಕ ಹೇಳಿಕೆ ನೀಡಿದರು ಸಾರಾ.

ಎಸ್ ಐ ಟಿಯಲ್ಲಿರುವ ಕೆಲ ಅಧಿಕಾರಿಗಳು ಕಾಂಗ್ರೆಸ್ ನ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆ.ಆರ್.‌‌ ನಗರ ಶಾಸಕರ ಕುಮ್ಮಕ್ಕನಿಂದ ಎಚ್.ಡಿ. ರೇವಣ್ಣ ಮೇಲೆ ಪ್ರಕರಣ ದಾಖಲಾಗಿದೆ ಎಂಬ ಆರೋಪ‌ವಿದೆಯಲ್ಲ ಎಂಬ ಪ್ರಶ್ನೆಗೆ,ಸಾರಾ ಮಹೇಶ್ ಪ್ರತಿಕ್ರಿಯಿಸಿ,
ಹಿಂದೆ ಭವಾನಿ ರೇವಣ್ಣ ನನ್ನ ಚುನಾವಣೆಯಲ್ಲೇ ಇವತ್ತಿನ ಶಾಸಕರಿಗೆ ಏನೇನು ಸಹಾಯ ಮಾಡಿದ್ದರು ಎಂಬುದು ಗೊತ್ತಿದೆ. ಆ ಶಾಸಕರೆ ಅವರ ಮೇಲಿನ ಆರೋಪಕ್ಕೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

ರಾಜಗೋಪಾಲ್ ತೋಟದಿಂದ ಸಂತ್ರಸ್ತ ಮಹಿಳೆಯನ್ನು ನಾನು ರಕ್ಷಿಸಿಲ್ಲ,ರಕ್ಷಿಸಿದ್ದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಆ ಕ್ಷಣವೇ ಜೆಡಿಎಸ್ ಗೂ ರಾಜೀನಾಮೆ ಕೊಡುತ್ತೇನೆ ಎಂದು
ಸಾರಾ ಮಹೇಶ್ ಕಡಕ್ಕಾಗಿ ಹೇಳಿದರು.


Share this with Friends

Related Post