Mon. Dec 23rd, 2024

ಇಂದು ರಾಜ್ಯಕ್ಕೆ ಅಮಿತ್ ಶಾ ಆಗಮನ, ಗರಿಗೆದರಿದ ರಾಜಕೀಯ ಚಟುವಟಿಕೆಗಳು

Amith Shah
Share this with Friends

ಮೈಸೂರು, ಫೆ.10 : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕಣ ರಂಗೇರುತ್ತಿದೆ.ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಕ್ಕಾಗಮಿಸುತ್ತಿದ್ದು ಮಹತ್ವದ ಸಭೆ ನಡೆಸಲಿದ್ದಾರೆ. ಇಂದು ರಾತ್ರಿ 10.50ಕ್ಕೆ ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಅಮಿತ್ ಶಾ, ನೇರವಾಗಿ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರೆಡಿಸನ್ ಬ್ಲೂ ಹೋಟೆಲ್​ಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.

ಇನ್ನು ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದರ್ಶನ‌ ಪಡೆದು ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನ ಸುತ್ತೂರು ಮಠದಿಂದ ವಾಪಸ್ ರೆಡಿಸನ್ ಬ್ಲೂ ಹೋಟೆಲ್ ಆಗಮಿಸಿ ಎರಡು ಗಂಟೆಗಳ ಕಾಲ ಲೋಕಸಭಾ ಚುನಾವಣೆ ಸಂಬಂಧ ರಾಜ್ಯ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.

ಇನ್ನು ನಾಳೆ (ಭಾನುವಾರ) ಮಧ್ಯಾಹ್ನ 2.40ಕ್ಕೆ ಅಮಿತ್ ಶಾ ರೆಡಿಸನ್ ಬ್ಲೂ ಹೋಟೆಲ್​ ಬಿಜೆಪಿ ನಾಯಕರ ಸಭೆ ನಡೆಸಲಿದ್ದು, ಲೋಕಸಭೆ ಚುನಾವಣೆ ಸಂಬಂಧ ಮಹತ್ವ ಚರ್ಚೆ ನಡೆಸಲಿದ್ದಾರೆ. ಇನ್ನು ಮುಖ್ಯವಾಗಿ ಸಭೆಯಲ್ಲಿ ಬಿಜೆಪಿ ನಾಯಕರ ಜೊತೆಗೆ ಮಿತ್ರ ಪಕ್ಷದ ನಾಯಕ ಎಚ್​ಡಿ ಕುಮಾರಸ್ವಾಮಿ ಸಹ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಸಭೆ ಮಹತ್ವ ಪಡೆದುಕೊಂಡಿದ್ದು, ಈ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಅದರಲ್ಲೂ ಮುಖ್ಯವಾಗಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಬೇಕೋ ಅಥವಾ ಉಳಿಸಿಕೊಂಡು ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸಬೇಕೋ ಎನ್ನುವ ಬಗ್ಗೆಯೂ ನಿರ್ಧಾರವಾಗಲಿದೆ.

ನಟ ಮಿಥುನ್ ಚಕ್ರವರ್ತಿಗೆ ಆಸ್ಪತ್ರೆಗೆ ದಾಖಲು


Share this with Friends

Related Post