Tue. Dec 24th, 2024

ಲೋಕಸಭಾ‌‌ ಚುನಾವಣೆ:ರಾಜ್ಯದಲ್ಲಿ ಎರಡನೆ ಹಂತದ ಮತದಾನ ಮುಕ್ತಾಯ

Share this with Friends

ಬೆಂಗಳೂರು, ಮೇ.7: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೆ‌ ಹಂತದ ಮತದಾನ ಸಣ್ಣ,ಪುಟ್ಟ ಗೊಂದಲ ಹೊರತುಪಡಿಸಿ ಶಾಂತಿಯುತವಾಗಿ ಮುಗಿದಿದೆ.

ರಾಜ್ಯದಲ್ಲಿ 2ನೇ ಹಂತದ ಮತದಾನದ ಅವಧಿ ಮುಕ್ತಾಯವಾಗಿದ್ದು, ಮತಗಟ್ಟೆಯಲ್ಲಿ ಇರುವವರಿಗಷ್ಟೇ ಕೊನೇ ಕ್ಷಣದಲ್ಲಿ ಮತ ಚಲಾವಣೆಗೆ ಅವಕಾಶ ನೀಡಲಾಯಿತು.

ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ ಹಂತದ ನಡೆದಿತ್ತು, ಇಂದು ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು,ಒಟ್ಟಾರೆ ಸಂಜೆ 6 ಗಂಟೆವರೆಗೆ ಶೇ.66.05ರಷ್ಟು ಮತದಾನವಾಗಿದೆ.


Share this with Friends

Related Post