Tue. Dec 24th, 2024

ಎಸ್.ಎಂ.ಕೃಷ್ಣ ಆರೋಗ್ಯ ವಿಚಾರಿಸಿದಸಿಎಂ ಸಿದ್ದರಾಮಯ್ಯ

Share this with Friends

ಬೆಂಗಳೂರು, ಮೇ.7: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು‌,ಚಿಕಿತ್ಸೆ ಮುಂದುವರಿದಿದೆ.

ಎಸ್.ಎಂ. ಕೃಷ್ಣ ಮಣಿಪಾಲ್ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ, ಎಸ್.ಎಂ.ಕೃಷ್ಣ ಅವರ ಆರೋಗ್ಯ ವಿಚಾರಿಸಿದರು.

ಶೀಘ್ರವಾಗಿ ಗುಣಮುಖವಾಗಿ ಮನೆಗೆ ಹಿಂದಿರುಗುವಂತೆ ಮಾಜಿ ಸಿಎಂ‌ಗೆ ಹಾಲಿ ಸಿಎಂ ಹಾರೈಸಿದರು.

91ವರ್ಷದ ಕೃಷ್ಣ ಅವರು ಶ್ವಾಸಕೋಶದ ಇನ್ಫೆಕ್ಷನ್ ನಿಂದ ಬಳಲುತ್ತಿದ್ದಾರೆ,ಅವರು‌‌ ಚಿಕಿತ್ಸೆಗೆ ಸೂಕ್ತವಾಗಿ‌ ಸ್ಪಂದಿಸುತ್ತಿದ್ದಾರೆ ಆತಂಕ‌ಪಡಬೇಕಿಲ್ಲ,ಸ್ವಲ್ಪ ಮಟ್ಟಗೆ ಆರೋಗ್ಯ ಸುಧಾರಿಸಿದೆ ಎಂದು ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಶ್ವಾಸಕೋಶ ತಜ್ಞ ಡಾ. ಸತ್ಯನಾರಾಯಣ ತಿಳಿಸಿದ್ದಾರೆ.


Share this with Friends

Related Post