Fri. Nov 1st, 2024

ಸ್ವಾಮಿ ಚಿನ್ಮಯಾನಂದರ ಜಯಂತಿ: ಗೋವುಗಳಿಗೆ ಮೇವು

Share this with Friends

ಮೈಸೂರು,ಮೇ.8: ಅಪೂರ್ವ ಸ್ನೇಹ ಬಳಗವು ಗೋವುಗಳಿಗೆ ಮೇವು ನೀಡುವ ಮೂಲಕ ಸ್ವಾಮಿ ಚಿನ್ಮಯಾನಂದರ 108ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು

ನಗರದ ನಂಜುಮಳಿಗೆ ಸುತ್ತಮುತ್ತ ಗೋವುಗಳಿಗೆ ಮೇವು,ಹಣ್ಣು ತಿನ್ನಿಸಲಾಯಿತು.

ಈ ವೇಳೆ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್,
ಸ್ವಾಮಿ ಚಿನ್ಮಯಾನಂದ ಅವರು ಜನರನ್ನು ಸನ್ಮಾರ್ಗದ ಕಡೆ ಪ್ರೇರೇಪಿಸಿದ್ದರು ಎಂದು ಹೇಳಿದರು.

ಭಾರತ ಮತ್ತು ವಿದೇಶಗಳಲ್ಲಿ ಉಪನಿಷತ್ತುಗಳಲ್ಲಿನ ಜ್ಞಾನವನ್ನು ಪ್ರಚಾರ ಮಾಡುವುದಕ್ಕಾಗಿಯೇ ಚಿನ್ಮಯ ಮಿಷನ್ ಸ್ಥಾಪಿಸಿದರು, ಚಿನ್ಮಯ ಮಿಷನ್‌ನ ಧ್ಯೇಯವಾಕ್ಯ ಗರಿಷ್ಠ ಜನರಿಗೆ ಗರಿಷ್ಠ ಸಮಯಕ್ಕೆ ಗರಿಷ್ಠ ಸಂತೋಷವನ್ನು ನೀಡುವುದು ಎಂಬ ಚಿಂತನೆಯೊಂದಿಗೆ ಲಕ್ಷಾಂತರ ಭಕ್ತಾದಿಗಳನ್ನು ವಿಶ್ವಾದ್ಯಂತ ಹೊಂದಿರುವ ಮಹಾ ಜ್ಞಾನಿ ಅವರು, ಅವರ ತತ್ವ ಸಿದ್ಧಾಂತಗಳು ನಮಗೆಲ್ಲಾ ಪ್ರೇರಣೆಯಾಗಿದೆ ಎಂದು ಹೇಳಿದರು.

ಸ್ವಾಮಿ ಚಿನ್ಮಯ ಮಿಷನ್ ಭಕ್ತಾದಿಗಳಾದ ದಯಾನಂದ್, ಬೈರತಿ ಲಿಂಗರಾಜು, ಆನಂದ್, ಮಂಜುನಾಥ್, ನಟರಾಜ್, ಶಿವು, ದರ್ಶನ್, ದುರ್ಗಾ ಪ್ರಸಾದ್ ಮತ್ತಿತರರು ಹಾಜರಿದ್ದರು.


Share this with Friends

Related Post