Fri. Nov 1st, 2024

ರೇವಣ್ಣ ಪರ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡುವೆ-ಹೆಚ್ ಡಿಕೆ

Share this with Friends

ಬೆಂಗಳೂರು,ಮೇ.8: ರೇವಣ್ಣ ವಿಚಾರಕ್ಕಾಗಿ ಮಾತ್ರ ಹೋರಾಟ ಮಾಡುವೆ, ಪ್ರಜ್ವಲ್ ಬಗ್ಗೆ ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ರೇವಣ್ಣ ಅವರ ಪರವಾಗಿ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತೇನೆ ಸಹೋದರ ಆಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ರಚನೆ ಆಗಿದೆ,ಆದರೆ ತನಿಖೆ ರೇವಣ್ಣ, ಪ್ರಜ್ವಲ್ ಮೇಲೆ ಟಾರ್ಗೆಟ್ ಮಾಡಲಾಗಿದೆ,ವೀಡಿಯೋ ಬಿಡುಗಡೆ ಮಾಡಿದವರನ್ನ ಏಕೆ ತನಿಖೆ ಮಾಡುತ್ತಿಲ್ಲ ಎಂದು ಗೃಹ ಸಚಿವರನ್ನ ಪ್ರಶ್ನಿಸಿದರು.

ಮಹಿಳಾ ಆಯೋಗ ಕೂಡ ಪತ್ರ ಬರೆದಿದೆ, ವೀಡಿಯೋ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಅಂತ. ಆದರೆ ಇದುವರೆಗೂ ಏನೂ ಮಾಡಿಲ್ಲ,ಮಿಸ್ಟರ್ ಪರಮೇಶ್ವರ್ ಏನು ಮಾಡ್ತಾ ಇದ್ದಾರೆ ಎಂದು ಪ್ರಶ್ನಿಸಿದರು.

ಕಾರ್ತಿಕ್ 14 ವರ್ಷ ಕೆಲಸದಲ್ಲಿ ಇದ್ದವನು, ಪ್ರಜ್ವಲ್ ನಡವಳಿಕೆ ಗೊತ್ತಿದ್ದ ಮೇಲೆ ಕೆಲಸ ಬಿಡಬೇಕಿತ್ತು, ಬಂಡೆ ರಕ್ಷಣೆ ಕೊಡುತ್ತೆ ಅಂದುಕೊಂಡಿದ್ದಾನೆ ಎಂದು ಗೇಲಿ ಮಾಡಿದರು.

ರೇವಣ್ಣಗೆ ಮಾತ್ರ ನೋಟಿಸ್ ಕೊಟ್ಟಿದ್ದಾರೆ. ನವೀನ್, ಕಾರ್ತಿಕ್, ಶ್ರೇಯಸ್‌ಗೆ ನೋಟಿಸ್ ಕೊಟ್ಟಿಲ್ಲ,ನಾನೇನು ಬ್ಲ್ಯಾಕ್‌ಮೇಲರ್‌ ಅಲ್ಲ, ಡಿ.ಕೆ ಸಂಸ್ಕೃತಿ ಎಲ್ಲರಿಗೂ ಗೊತ್ತಾಗಿದೆ. ಡಿಕೆ, ದೇವರಾಜೇಗೌಡ ಜೊತೆ ಯಾಕಪ್ಪ ಮಾತಾನಾಡಿದೆ, ನಿನಗೇನಿತ್ತು ಅಂತಹ ಕೆಲಸ ಎಂದು ಕುಮಾರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗೆ ಮಾನ ಮರ್ಯಾದೆ ಇದೆಯಾ ಪರಮೇಶ್ವರ ನಿಮಗೆ ಬೆನ್ನುಮೂಳೆ ಇದಿಯಾ, ಹಿಟ್ ಅಂಡ್ ರನ್ ಅಂತಾರೆ ನನಗೆ, ಎಸ್‌ಐಟಿ ಅಧಿಕಾರಿಗಳಿಗೆ ಕ್ರೆಡಿಬಲಿಟಿ ಇದ್ಯ, ಯಾವ ಪ್ರಕರಣ ಕೂಡ ತಾರ್ಕಿಕವಾಗಿ ಅಂತ್ಯ ಮಾಡಲಿಲ್ಲ ಎಂದು ಗರಂ ಆಗಿ ನುಡಿದರು.

ಸಿದ್ದರಾಮಯ್ಯ, ಕೆಂಪಯ್ಯನ್ನ ಇಟ್ಟುಕೊಂಡು ನನ್ನ ಅರೆಸ್ಟ್ ಮಾಡಬೇಕು ಅಂತ ನಿಂತಿದ್ರು. ಒಂದು ದಿನ ಆದ್ರೂ ಅರೆಸ್ಟ್ ಮಾಡ್ಬೇಕು ಅಂತ ನಿಂತಿದ್ರು. ವಕೀಲರು ವಿಚಾರಣೆಗೆ ಹೋಗ್ಬೇಡಿ ಅಂದ್ರು ಅವತ್ತು ಹೋಗಿಲ್ಲ. 2,900 ಪ್ರಕರಣ ಅಂದಿದ್ದಾರೆ. ಇದುವರೆಗೂ ಯಾವುದೇ ಕೇಸ್ ಆಗಿಲ್ಲ. ಎಷ್ಟು ಜನ ಬಂದಿದ್ದಾರೆ ಗೊತ್ತಿಲ್ವಾ, ಸಂತ್ರಸ್ತೆಯನ್ನು ತೋಟದ ಮನೆಯಲ್ಲಿ ಹಿಡಿದ್ರಾ, ಹುಣಸೂರಿನಲ್ಲಿ ಸಂತ್ರಸ್ತೆ ಸಿಕ್ಕಿದ್ದು ಸಂಬಂಧಿಕರ ಮನೆಯಲ್ಲಿ. ಪವಿತ್ರ ಅವರ ಮನೆಯಿಂದ ಕರೆದುಕೊಂಡು ಬಂದಿದ್ದಾರೆ ಎಂದು ಹೆಚ್ ಡಿ ಕೆ ಆರೋಪಗಳ ಸುರಿಮಳೆ ಸುರಿಸಿದರು.


Share this with Friends

Related Post