Wed. Dec 25th, 2024

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್

Share this with Friends

ಬೆಂಗಳೂರು,ಮೇ.9: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು,
ಶೇ 73.40 ರಷ್ಟು ಫಲಿತಾಂಶ ಬಂದಿದೆ,ಈ ಬಾರಿ ಕೂಡಾ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಅವರೊಂದಿಗೆ ಫಲಿತಾಂಶ ಪ್ರಕಟಿಸಿದರು

ಪರೀಕ್ಷೆಯಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ,ಈ ಪೈಕಿ ಬಾಲಕರು- 2,87,416 (65.90%), ಬಾಲಕಿಯರು-3,43,788 (81.11%) ಪಾಸಾ ಗಿದ್ದಾರೆ.

ಶೇ.94 ಫಲಿತಾಂಶ ಪಡೆದು ಉಡುಪಿ ಮೊದಲ ಸ್ಥಾನದಲ್ಲಿದೆ.ಶೇ. 92.12 ಫಲಿತಾಂಶ ಪಡೆದ ದಕ್ಷಿಣ ಕನ್ನಡ ಎರಡನೆ ಸ್ಥಾನ,ಶೇ 88.67 ನೊಂದಿಗೆ ಶಿವಮೊಗ್ಗ ಮೂರನೇ ಸ್ಥಾನದಲ್ಲಿವೆ. ಯಾದಗಿರಿ ಕೇವಲ ಶೇ.50.59ರಷ್ಟು ಫಲಿತಾಂಶದೊಂದಿಗೆ ಕೊನೆ ಸ್ಥಾನದಲ್ಲಿದೆ.

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು. ಹೀಗಾಗಿ ಫಲಿತಾಂಶದಲ್ಲಿ ಕುಸಿತ ಕಂಡಿದೆ. 2022-23ನೇ ಸಾಲಿನಲ್ಲಿ ಶೇ 83.89 ರಷ್ಟು ಫಲಿತಾಂಶ ದಾಖಲಾಗಿತ್ತು, ಈ ಬಾರಿ ಶೇ 73.40 ರಷ್ಟು ಫಲಿತಾಂಶ ಬಂದಿದೆ.

785 ಸರ್ಕಾರಿ ಶಾಲೆಗಳು, 206 ಅನುದಾನಿತ ಶಾಲೆಗಳು,1297ಖಾಸಗಿ ಶಾಲೆ
ಒಟ್ಟು 2288‌ ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿವೆ.

3 ಸರ್ಕಾರಿ ಶಾಲೆಗಳು,13 ಅನುದಾನಿತ‌ ಶಾಲೆಗಳು,62 ಖಾಸಗಿ ಶಾಲೆಗಳು ಒಟ್ಟು 78 ಶಾಲೆಗಳು ಶೂನ್ಯ ಸಾಧನೆ ಮಾಡಿವೆ ಎಂದು ಮಂಜುಶ್ರೀ ತಿಳಿಸಿದರು.

ಬಾಗಲ್ಕೊಟ ಜಿಲ್ಲೆ ಮುದೋಳ ತಾಲೂಕಿನ ವಜ್ರಮತಿ ಗ್ರಾಮದ ರೈತಕುಟುಂಬದ ನಿಖಿತ ಎಂಬ ಬಾಲಕಿ ಮುರಾರ್ಜಿ ದೇಸಾಯಿ ಸರ್ಕಾರಿ ಶಾಲೆಯಲ್ಯ ಓದಿದ್ದು,ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.ಈ ಬಾಲಕಿ 625ಕ್ಕೆ‌‌ 625 ಅಂಕ ಗಳಿಸಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಮಧುಗಿರಿಯ ಹೃಷಿತಾ, ಚಿಕ್ಕೋಡಿಯ ಸಿದ್ದಾಂತ್ ದಕ್ಷಿಣ ಕನ್ನಡದ ಚಿನ್ಮಯ್, ಉಡುಪಿಯ ಸಹನಾ, ಶಿರಸಿಯ ದರ್ಶನ್ ಮತ್ತು ಶ್ರೀ ರಾಮ್, ಬೆಂಗಳೂರಿನ ವೇದ ಪಿ ಶೆಟ್ಟಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.


Share this with Friends

Related Post