Thu. Dec 26th, 2024

ಕುಮಾರಸ್ವಾಮಿ ಅವರಿಂದ ದಿಕ್ಕು ತಪ್ಪಿಸುವ ಕೆಲಸ:ಶ್ರೀನಾಥ್ ಬಾಬು ಆರೋಪ

Share this with Friends

ಮೈಸೂರು,ಮೇ.9: ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣ ಸಂಬಂಧ ಕುಮಾರಸ್ವಾಮಿ ಅವರು
ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜಿ. ಶ್ರೀನಾಥ್ ಬಾಬು ಆರೋಪಿಸಿದ್ದಾರೆ

ಹೆಚ್.ಡಿ.ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಚುನಾವಣೆ ಪೂರ್ವದಲ್ಲಿ ಪ್ರಜ್ವಲ್ ರೇವಣ್ಣ ನನ್ನ ಮಗನಿದ್ದಂತೆ ಎಂದಿದ್ದರು ಕುಮಾರಸ್ವಾಮಿ, ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಕೂಡಲೇ ನಮ್ಮ ಹಾಗೂ ಎಚ್.ಡಿ. ರೇವಣ್ಣ ಕುಟುಂಬ ಬೇರೆ ಬೇರೆ ಎನ್ನುತ್ತಿದ್ದಾರೆ ಎಂದು ಶ್ರೀನಾಥ್ ಟೀಕಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂದು ಹೇಳದೆ, ಡಿ.ಕೆ.ಶಿವಕುಮಾರ್ ಇದರ ರೂವಾರಿ ಎಂದು ಸುಳ್ಳು ಅಪಾದನೆ ಮಾಡಿ ರಾಜೀನಾಮೆ ನೀಡಲಿ ಎಂದು ಒತ್ತಾಯಿಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ನೂರಾರು ಅಮಾಯಕ ಮಹಿಳೆಯರ ಅಶ್ಲೀಲ ಚಿತ್ರಗಳ ವಿಡಿಯೊಗಳನ್ನು ಪೆನ್‌ಡ್ರೈವ್‌ ಸಂಗ್ರಹಿಸಿರುವುದು ಬಿಜೆಪಿ ಮುಖಂಡ ದೇವರಾಜೇಗೌಡ.ಆತನನ್ನು ಬಂಧಿಸಿ ವಿಚಾರಣೆ ನಡೆಸಿದರೆ ಸತ್ಯ ಬಯಲಿಗೆ ಬರಲಿದೆ.

ಕುಮಾರಸ್ವಾಮಿಗೆ ಮಹಿಳೆಯರ ಪರ ಕನಿಕರ ಇದ್ದಲ್ಲಿ ಪ್ರಜ್ವಲ್ ಎಲ್ಲಿದ್ದಾರೆ ಎಂಬ ಬಗ್ಗೆ ಎಸ್‌ಐಟಿ ತಂಡಕ್ಕೆ ಮಾಹಿತಿ ನೀಡಿ ವಿಚಾರಣೆಗೆ ಒತ್ತಾಯಿಸಲಿ.

ಅದು ಬಿಟ್ಟು ಏನೇನೊ‌ ಆರೋಪ ಮಾಡುವುದು ಮುಂದುವರಿದರೆ ಅವರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀನಾಥ್ ಎಚ್ಚರಿಸಿದ್ದಾರೆ

ಅಮಾಯಕ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗಬೇಕು,ಕುಮಾರಸ್ವಾಮಿ ಅವರು ನೈತಿಕ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


Share this with Friends

Related Post