Mon. Dec 23rd, 2024

ಜಮೀನು‌ ವಿಚಾರಕ್ಕೆ ಚಿಕ್ಕಪ್ಪನ ಕೊಲೆಗೈದ ಮಗ

Share this with Friends

ಬೆಳಗಾವಿ: ಜಮೀನಿನ ವಿಚಾರ ಸಂಬಂಧ ಚಿಕ್ಕಪ್ಪನ ಕೊಲೆ‌ ಮಾಡಿದ‌ ಘಟನೆ ಅಥಣಿ ‌ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ದಬದಬಹಟ್ಟಿಯ ಗ್ರಾಮದ ನಿವಾಸಿ ಕೇಶವ ಬೋಸಲೆ‌(50)ಕೊಲೆಯಾದ ದುರ್ದೈವಿಯಾಗಿದ್ದಾರೆ.

ಈತನ ಅಣ್ಣನನ್ನ ಮಗ ಖಂಡೊಬಾ ಬೋಸಲೆ(28 ) ಈ‌ ಕೊಲೆ ಮಾಡಿದ್ದಾನೆ‌. ಗುರುವಾರ ಸಂಜೆ ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಿಗಿದ್ದಾನೆ. ಜಮೀನಿನ ವಿಚಾರವಾಗಿ ಹಲವು ವರ್ಷಗಳಿಂದ ಇಬ್ಬರ ನಡುವೆ ಜಗಳ‌ ನಡೆತ್ತಿತ್ತು.ನಿನ್ನೆ ಇಬ್ಬರು ಕೂಡಿ ಮದ್ಯ ಸೇವೆನೆ ಮಾಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆದು ಈ ದುರಂತ ಸಂಭವಿಸಿದೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this with Friends

Related Post