ಮೈಸೂರು, ಮೇ.10: ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸ ಶುಕ್ಲ ಪಕ್ಷದ ತೃತೀಯ ದಿನ ಪರಶುರಾಮ ಜಯಂತಿ ಆಚರಿಸಲಾಗುತ್ತದೆ ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಹೇಳಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಚಾಮರಾಜಪುರಂನಲ್ಲಿರುವ ಬ್ರಾಹ್ಮಣ ಯುವ ವೇದಿಕೆ ಕಛೇರಿಯಲ್ಲಿ ಏರ್ಪಡಿಸಿದ್ದ ಪರಶುರಾಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಶುರಾಮರು ಭಗವದ್ ವಿಷ್ಣುವಿನ ಆರನೇ ಅವತಾರ ಎಂಬ ಪ್ರತೀತಿಯಿದೆ. ಉತ್ತರಭಾರತದಲ್ಲಿ ಪರಶುರಾಮರಿಗೆ ಕೋಟ್ಯಾಂತರ ಭಕ್ತ ಸಮೂಹವಿದೆ, ಪಿತೃವಾಕ್ಯ ಪತಿಪಾಲಕ ಪರಶುರಾಮರು ವಿಷ್ಣುವಿನ ಆರನೆಯ ಅವತಾರ, ಸಪ್ತರ್ಷಿ ಜಮದಗ್ನಿಯ ಪುತ್ರರಾದ ಅವರು ತ್ರೇತಾಯುಗದ ಕೊನೆಯಲ್ಲಿ ಅವತಾರ ತಾಳಿದರು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಅನಿಲ್ ಕುಮಾರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಕಡಕೋಳ ಜಗದೀಶ್, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾದ ವಿಜಯ್ ಕುಮಾರ್, ಪ್ರಶಾಂತ್, ವೆಂಕಟರಾಮ್, ಜೈ ಶ್ರೀ ರಾಮ್ ಯುವ ಬ್ರಿಗೇಡ್ ಅಧ್ಯಕ್ಷರಾದ ಮಹೇಶ್ ಕುಮಾರ್, ಸಂದೇಶ್ ಕುಮಾರ್ ಮತ್ತಿತರರು ಹಾಜರಿದ್ದರು.