Wed. Dec 25th, 2024

ಕಾಯಕ ನಿಷ್ಠೆ ಸಾರಿದ ದಾರ್ಶನಿಕ ಬಸವಣ್ಣನವರು:ಎಸ್. ಜೈ ಪ್ರಕಾಶ್

Share this with Friends

ಮೈಸೂರು, ಮೇ.10: ಕಾಯಕ ನಿಷ್ಠೆಯನ್ನು ಸಾರಿದ ದಾರ್ಶನಿಕ ಬಸವಣ್ಣನವರು ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜೈ ಪ್ರಕಾಶ್ ಹೇಳಿದರು.

ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಶ್ರೀ ಬಸವಣ್ಣನವರ ಜಯಂತಿಯಲ್ಲಿ ಅವರ ಪುತ್ತಳಿಗೆ ಪುಷ್ಪ ನಮನ ಮಾಡಿ ಮಾತನಾಡಿದರು.

ಬಸವಣ್ಣ ನವರು ಕಾಯಕ ನಿಷ್ಠೆಯನ್ನು ಸಾರಿದ ದಾರ್ಶನಿಕ, ಎಲ್ಲರನ್ನೂ ಸಮಾನವಾಗಿ ಕಂಡ ಮಹಾನ್ ಮಾನವತಾವಾದಿ, ದೇಹವನ್ನೇ ದೇಗುಲವನ್ನಾಗಿಸಿದ ಶರಣ, ಭಕ್ತಿ ಭಂಡಾರಿ ಎಂದು ‌ಬಣ್ಣಿಸಿದರು.

12ನೆ ಶತಮಾನದಲ್ಲೇ ಅನುಭವ ಮಂಟಪವನ್ನು ತೆರೆದು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಇಡೀ ವಿಶ್ವಕ್ಕೆ ಸಂದೇಶಗಳನ್ನು ನೀಡಿದರು. ಇವರ ತತ್ವ ಆದರ್ಶಗಳನ್ನು ಈಗಿನ ಜನತೆ ಅನುಸರಿಸಬೇಕು ಎಂದು ಕರೆ ನೀಡಿದರು.

ಮಹಾತ್ಮ ಗಾಂಧೀಜಿ ಯವರಿಂದ ಹಿಡಿದು, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಈಗಿನ ಪ್ರಧಾನಿ ನರೇಂದ್ರ ಮೋದಿ ರವರೂ ಸಹ ಶ್ರೀ ಬಸವಣ್ಣನವರ ಸಮಾನತಾವಾದಿ ಆದರ್ಶ ಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾವೇರಿ ಕ್ರಿಯಾಸಮಿತಿ ಕಾರ್ಯದರ್ಶಿ ತೇಜೇಶ್ ಲೋಕೇಶ್ ಗೌಡ, ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ್ ಗೋಲ್ಡ್ , ಪ್ರಮೀಳಾ, ಪೂರ್ಣಚಂದ್ರ ತೇಜಸ್ವಿ, ನಾಗರಾಜು ಮಹೇಶ್ ಗೌಡ, ಮಹದೇವು,ಲಯನ್ ಶಂಕರ್ ಗುರು, ಪ್ರಭಾಕರ, ವಿಷ್ಣು, ಸಂಜಯ್ ಮತ್ತಿತರರು ಹಾಜರಿದ್ದರು.


Share this with Friends

Related Post