Thu. Dec 26th, 2024

ಬಸವಣ್ಣನವರ ವಚನದ ಮೂಲಕ ಹೆಚ್ ಡಿ ಕೆಗೆ ಟಾಂಗ್ ನೀಡಿದ ಡಿಕೆಶಿ

Share this with Friends

ಬೆಂಗಳೂರು, ಮೇ.10: ಬಸವ ಜಯಂತಿ ಆಚರಣೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಸವಣ್ಣನವರ ವಚನವನ್ನು ಮಾರ್ಮಿಕವಾಗಿ ನುಡಿದರು.

ಬಸವ ಜಯಂತಿ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿರುವ ಬಸವೇಶ್ವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕದ ಡೊಂಕ ನೀವೇಕೆ ತ್ತಿದ್ದುವಿರಿ ನಿಮ್ಮ,ನಿಮ್ಮ ತನುವ ಸಂತೈಸಿಕೊಳ್ಳಿ ಎಂದು ಹೇಳಿದರು.

ನಿಮ್ಮ ಮನವ ಸಂತೈಸಿಕೊಳ್ಳಿ ಮೊದಲು ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೆ ವಚನಗಳ ಮೂಲಕ ಟಾಂಗ್ ನೀಡಿದರು.

ಬೇರೆಯವರ ಬಗ್ಗೆ ಮಾತನಾಡುವ ಮೊದಲು ಅಂದರೆ ಲೋಕದ ಡೋಂಕನ್ನು ತಿದ್ದುವ ಮೊದಲು ನಿಮ್ಮನ್ನು ನೀವು ತಿದ್ದುಕೊಳ್ಳಿ ಎಂದು ಬಸವಣ್ಣನವರು ಹೇಳಿದ್ದಾರೆ ನಾವು ಅದನ್ನು ಪಾಲಿಸೋಣ ನಂತರ ಬೇರೆ ವಿಚಾರ ಮಾತನಾಡೋಣ ಎಂದು ಹೇಳಿದರು

ರಾಜ್ಯಪಾಲರಿಗೆ ನಮ್ಮ ಕುರಿತು ದೂರು ನೀಡಿರುವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದರು.

ಬಸವಣ್ಣನವರು ಬಸವಕಲ್ಯಾಣದಲ್ಲಿ ಮೊದಲನೆಯ ಸಂಸತ್ ಅನ್ನು ಪ್ರಾರಂಭಿಸಿದರು ಅವರು ಹಾಕಿಕೊಟ್ಟ ಬುನಾದಿಯಲ್ಲಿ ನಾವು ಸಾಗುತ್ತಿದ್ದೇವೆ ಜಾತಿ ಧರ್ಮ ಇಲ್ಲದೆ ಸಮಾನತೆಯನ್ನು ಅವರು ಪ್ರತಿಪಾದಿಸಿದರು ನಮ್ಮ ಸರ್ಕಾರದ ಕಾರ್ಯಕ್ರಮಗಳು ಸಾಮಾನತೆಯ ಸಮಾಜದ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು

ಈ ವೇಳೆ ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ, ಸಚಿವ ಈಶ್ವರ್ ಖಂಡ್ರೆ, ಶಾಸಕ ವಿನಯ್ ಕುಲಕರ್ಣಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post