Mon. Dec 23rd, 2024

ಕ್ರೂಸರ್ ಟೈರ್ ಬ್ಲಾಸ್ಟ: ಮೂವರ ಮಹಿಳೆಯರ‌‌ ದುರ್ಮರಣ

Share this with Friends

ಬೆಳಗಾವಿ: ಟೈರ್ ಬ್ಲಾಸ್ಟನಿಂದ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರ ಮಹಿಳೆಯರ ದುರ್ಮರಣ ಹೊಂದಿದ್ದ ಘಟನೆ ಮಹಾರಾಷ್ಟ್ರದ ಜತ್ತ- ಸಾಂಗೋಲಾ ಮಾರ್ಗದಲ್ಲಿ ದುರಂತ ಸಂಭವಿಸಿದೆ. ಮಹಾದೇವಿ ಚೌಗಲಾ, ಮತ್ತು ಗೀತಾ ದೋಡಮನಿ‌ ಅಥಣಿ ತಾಲೂಕಿನ ಬಳ್ಳಿಗೇರಿ ನಿವಾಸಿಗಳಾಗಿದ್ದಾರೆ. ಮಲಾಬಾದ ಗ್ರಾಮದ ಕಸ್ತೂರಿ ತಾವಂಶಿ ಮೃತ ದುರ್ದೈವಿಗಳಾಗಿದ್ದಾರೆ.ಇನ್ನುಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ವಾಹನದಲ್ಲಿದ್ದ ಗಾಯಾಳುಗಳನ್ನು ಸಾಂಗೋಲಾ ಹಾಗೂ ಮಿರಜ ಆಸ್ಪತ್ರೆ ದಾಖಲಿಸಲಾಗಿದೆ.

ಮಹಾರಾಷ್ಟದಲ್ಲಿ ದ್ರಾಕ್ಷಿ ಕೆಲಸಕ್ಕೆ ಬಳ್ಳಿಗೇರಿ ಗ್ರಾಮದಿಂದ ಕ್ರೂಸರ್ ವಾಹನದಲ್ಲಿ ತೆರಳುವ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ.


Share this with Friends

Related Post