Fri. Nov 1st, 2024

ಕಾಯಕದ ಶ್ರೇಷ್ಠತೆ ಸಾರಿದವರು ಬಸವಣ್ಣ: ಸುಬ್ರಮಣ್ಯ

Share this with Friends

ಮೈಸೂರು,ಮೇ.11: ಕಾಯಕದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದವರು ಬಸವಣ್ಣ ಎಂದು‌ ಜುಬಿಲಿಯಂಟ್ ಕಾರ್ಖಾನೆ ಮಾನವ ಸಂಪನ್ಮೂಲ ಇಲಾಖೆಯ ಹೆಚ್ ಆರ್ ಸುಬ್ರಹ್ಮಣ್ಯ ಹೇಳಿದರು.

ಸಮ ಸಮಾಜ ನಿರ್ಮಾಣದ ಕನಸು ಕಂಡು ಅದಕ್ಕಾಗಿ ಶ್ರಮಿಸಿದ ಬಸವಣ್ಣನವರು ಕಾಯಕವೇ ಪರಮಧರ್ಮವೆಂದು ಬೋಧಿಸಿದರು ಎಂದು ತಿಳಿಸಿದರು.

ನಗರದ ಬೋಗಾದಿಯ ಮರಟಿಕ್ಯಾತ್ನಳ್ಳಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ವಿಶ್ವ ತಂತ್ರಜ್ಞಾನದ ದಿನ ಹಾಗೂ ಬಸವ ಜಯಂತಿಯ ಅಂಗವಾಗಿ
ಜುಬಿಲಿಯಂಟ್ ಕಾರ್ಖಾನೆಯ ಮಾನವ ಸಂಪನ್ಮೂಲ ಇಲಾಖೆಯ ಎಚ್ ಆರ್ ಸುಬ್ರಹ್ಮಣ್ಯ ರವರಿಗೆ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು
12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪನೆ ಮಾಡಿದ್ದ ಅನುಭವ ಮಂಟಪ ಎಲ್ಲ ಜಾತಿ ಜನಾಂಗದವರ ಪ್ರವೇಶಕ್ಕೆ ಸಮಾನ ಅವಕಾಶ ಕಲ್ಪಿಸಿತ್ತು. ಅಂದು ಶರಣರು ಬರೆದು ಚರ್ಚಿಸಿದ ವಚನಗಳು ಎಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ ಡಿ ಮಾತನಾಡಿ,ಬಸವಣ್ಣನವರ ವಚನ ಸಾಹಿತ್ಯ ಅತ್ಯಂತ ಸರಳವಾಗಿದ್ದು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ನಮ್ಮ ಜೀವನ ಸಾರ್ಥಕವಾಗುವುದು ಎಂದು ತಿಳಿಸಿದರು.

ಪ್ರದೀಪ್ ಕುಮಾರ್, ಮಂಜು, ಜೂಲಿಯಂಟ್ ನೆಸ್ಲೆ ಕಾರ್ಖಾನೆಯ ಮಾನವ ಸಂಪನ್ಮೂಲ ಇಲಾಖೆ ನಿತಿನ್, ಕಾರ್ಖಾನೆಯ ಇಂಜಿನಿಯರಿಂಗ್ ವಿಭಾಗದ ರಾಘವೇಂದ್ರ, ಮಹೇಶ್ ಕುಮಾರ್, ಪರಮೇಶ್,ವಿಭಾಗದ ಪ್ರಶಾಂತ್,ಜ್ಯೋತಿ, ಅನಿತಾ,ದೀಪಕ್,ನಿತಿನ್, ಆದರ್ಶ್, ಸಂತೋಷ್,ರಾಚಪ್ಪ,
ಹನುಮಂತಪ್ಪ, ಜಯಶ್ರೀ,ಮೂರ್ತಿ, ಮಹದೇವ್ ಮತ್ತಿತರರು ಹಾಜರಿದ್ದರು.


Share this with Friends

Related Post