Sat. Apr 19th, 2025

ವಕೀಲೆ ಆತ್ಮಹತ್ಯೆ

Share this with Friends

ಬೆಂಗಳೂರು, ಮೇ.11: ‌ವಕೀಲೆಯೊಬ್ಬರು‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ‌ಬೆಂಗಳೂರಿನ‌ ಸಂಜಯ್ ನಗರ ಪೊಲೀಸ್ ಠಾಣಾ‌‌ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಎ.ಎಸ್ ಅಧಿಕಾರಿ ಶಿವಕುಮಾರ್ ಅವರ ಪತ್ನಿ ಚೈತ್ರಾ ಗೌಡ ಆತ್ಮಹತ್ಯೆಗೆ‌ ಶರಣಾಗಿರುವ ವಕೀಲೆ ಎಂದು ಗೊತ್ತಾಗಿದೆ.

ಅವರ ಮೃತದೇಹ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಚೈತ್ರ ಗೌಡ ಅವರ ಪತಿ ಕೆ.ಎ.ಎಸ್ ಅಧಿಕಾರಿ,ಆಕೆ ಹೈಕೋರ್ಟ್ ವಕೀಲರಾಗಿದ್ದರು ಎಂದು ‌ತಿಳಿದು ಬಂದಿದೆ.ಆದರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ನಿಗೂಢವಾಗಿದೆ.

ಶಿವಕುಮಾರ್ – ಚೈತ್ರಾ ದಂಪತಿಗೆ 5 ವರ್ಷದ ಮಗು ಇದ್ದಾನೆ. ಆಕೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಸಂಜಯ್ ನಗರದ ಮನೆಯ ಬೆಡ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಸಂಜಯ್ ನಗರ ಠಾಣೆ ಪೊಲೀಸರು ಭೇಟಿ ನೀಡಿ‌ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post