Mon. Dec 23rd, 2024

ಹಿರಿಯ ಸಂಶೋಧಕಿಗೆ ಸಹೋದ್ಯೋಗಿಯಿಂದ ಲೈಂಗಿಕ ಕಿರುಕುಳ

Share this with Friends

ಮೈಸೂರು,ಫೆ.10: ಮೈಸೂರಿನ ಕೇಂದ್ರೀಯ ಭಾಷಾ ಸಂಶೋಧನಾ ಸಂಸ್ಥೆಯ ಸಂಶೋಧಕಿಗೆ ಸಹೋದ್ಯೋಗಿಯೇ ಲೈಂಗಿಕ ಕಿರುಕುಳ ನೀಡಿದ ವಿಲಕ್ಷಣ ಪ್ರಕರಣ ವರದಿಯಾಗಿದೆ.

ಕೇಂದ್ರೀಯ ಭಾಷಾ ಸಂಶೋಧನಾ ಸಂಸ್ಥೆಯ
ಲ್ಲಿ ಹಿರಿಯ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಕೋಮಲಾ(ಹೆಸರು ಬದಲಿಸಲಾಗಿದೆ) ಎಂಬುವರಿಗೆ ಸಹದ್ಯೋಗಿ ಸಂತೋಷ್ ಕುಮಾರ್ ಮೊಹಂತಿ ಕಿರುಕುಳ ನೀಡಿದ ಆರೋಪಿ.

ಈತ ಮೊಬೈಲ್ ನಲ್ಲಿ ನಿರಂತರವಾಗಿ ತನ್ನ ನಗ್ನ ಚಿತ್ರಗಳನ್ನು ಡಾ.ಕೋಮಲಾ ಅವರಿಗೆ
ಕಳುಹಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾನೆ.

ಒರಿಸ್ಸಾ ಮೂಲದ ಸಂತೋಷ್ ಕುಮಾರ್ ಮೊಹಂತಿ 2019 ರಿಂದಲೂ ಡಾ.ಕೋಮಲಾ ಅವರ ಬೆನ್ನು ಬಿದ್ದಿದ್ದು ಲವ್ ಯೂ ಎಂದು ಮೆಸೇಜ್ ಗಳನ್ನ ಹಾಕುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದ.

ಈ ಬಗ್ಗೆ ಡಾ.ಕೋಮಲಾ ತಮ್ಮ ಸಹದ್ಯೋಗಿಗಳ ಬಳಿ ಹೇಳಿಕೊಂಡರಲ್ಲದೆ ಹೆಚ್.ಒ.ಡಿ. ಗಮನಕ್ಕೂ ತಂದಿದ್ದಾರೆ.

ನನಗೆ ಮದುವೆ ಆಗಿದೆ ನಿಮಗೂ ಮದುವೆ ಆಗಿದೆ.ಹೀಗೆ ವರ್ತಿಸಬಾರದೆಂದು ಬುದ್ದಿವಾದ ಕೂಡಾ ಹೇಳಿದ್ದಾರೆ.

ಆದರೂ ಸಂತೋಷ್ ಕುಮಾರ್ ಮೊಹಂತಿ ಬಗ್ಗದೆ ಇದೇ ಜ.10 ರಂದು ತನ್ನ ಮೊಬೈಲ್ ನಿಂದ ಡಾ.ಕೋಮಲಾಗೆ ನಗ್ನ ಚಿತ್ರಗಳನ್ನ ಕಳಿಸಿದ್ದಾನೆ.

ಆ‌ ಚಿತ್ರಗಳನ್ನು ಅವರು ಡಿಲೀಟ್ ಮಾಡಿದ್ದಾರೆ.ಫೋಟೋ ವೀಕ್ಷಣೆ ಮಾಡಿರುವುದನ್ನ ಖಚಿತಪಡಿಸಿಕೊಂಡ ಸಂತೋಷ್ ಕುಮಾರ್ ಮೊಹಂತಿ ಮರುದಿನವೇ ತನ್ನ ಗುಪ್ತಾಂಗದ ಫೋಟೋಗಳನ್ನ ಕಳಿಸಿದ್ದಾನೆ.

ಗಾಬರಿಗೊಂಡ ಆಕೆ ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಹಾಗೆ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಾಟ್ಸಾಪ್ ಮೆಸೇಜ್ ಮಾಡಿ ಬೆದರಿಸಿದ್ದಾನೆ.

ಇದೆಲ್ಲದರಿಂದ ನೊಂದ ಡಾ.ಕೋಮಲಾ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಘಟನೆ ನಡೆದ ಆಧಾರದ ಮೇಲೆ ನ್ಯಾಯಾಲಯದ ಅನುಮತಿ ಪಡೆದು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿಸಿ ಸಂತೋಷ್ ಕುಮಾರ್ ಮೊಹಂತಿ ವಿರುದ್ದ ಕ್ರಮ ಕೈಗೊಳ್ಳುವಂತೆ FIR ದಾಖಲಿಸಿ ಮನವಿ ಮಾಡಿದ್ದಾರೆ.


Share this with Friends

Related Post