Mon. Dec 23rd, 2024

ಧಾರಾಕಾರ ಮಳೆ: ಸಿಡಿಲಿನ‌ ಹೊಡತಕ್ಕೆ ಹೊತ್ತಿ ಉರಿದ ತೆಂಗಿನ‌ ಮರ

Share this with Friends

ಬೆಳಗಾವಿ: ಭಾರಿ ಗುಡುಗು ಸಹಿತ ಧಾರಾಕಾರ ಮಳೆ ಜಿಲ್ಲೆಯಲ್ಲಿ ಸುರಿದರೆ ಬೈಲಹೊಂಗಲ ಪಟ್ಟಣದ ಉಡಕೇರಿ
‌ಪಿಡಿಓ ಆಸೀಫ್ ಲತಿಫ ಅವರ ಹಿತ್ತಲ ಮನೆಯಲ್ಲಿ ಇದ್ದ ತೆಂಗಿನ‌ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿ ಉರಿದಿದೆ. ಧಾರಾಕಾರ ಮಳೆ ಇದ್ದ ಕಾರಣ ಕೆಲ ಹೊತ್ತು ಮರ ಹೊತ್ತಿ ಉರಿದಿದೆ.ತದನಂತರದಲ್ಲಿ ಸ್ಥಳಿಯರು, ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿ ನಂದಿಸಿದರು.

ಇನ್ನು ಹುಕ್ಕೇರಿ ತಾಲೂಕಿನಲ್ಲಿ ವರುಣಾರ್ಭಟದಿಂದ ಕಬ್ಬು ಬೆಳೆದ ರೈತರಲ್ಲಿ‌ ಸಂತಸ ಮೂಡಿದೆ. ಬಿಸಿಲಿನ‌ ತಾಪಕ್ಕೆ ಕಂಗಾಲಿದ್ದ ಜನರಿಗೆ ವರುಣದೇವ ತಂಪೆರಿದಿದ್ದಾನೆ.


Share this with Friends

Related Post