Mon. Dec 23rd, 2024

ಮಿಲಿಟರಿ ಅಧಿಕಾರಿ ಹೆಸರಲ್ಲಿ ವಂಚನೆ

Share this with Friends

ಮೈಸೂರು,ಫೆ.10: ವ್ಯಕ್ತಿಯೊಬ್ಬ ತಾನು ಮಿಲಿಟರಿ ಅಧಿಕಾರಿ, ಮನೆ ಬಾಡಿಗೆಗೆ ಬರುತ್ತೇನೆ ಎಂದು ನಂಬಿಸಿ 1.96 ಲಕ್ಷ ಹಣ ವಂಚಿಸಿರುವ ಪ್ರಕರಣ ನಗರದಲ್ಲಿ ನಡೆದಿದೆ.

ವಿಜಯನಗರ ಎರಡನೇ ಹಂತದ ಕೃಷ್ಣರಾಜ ಉಪಾಧ್ಯಾಯ ಎಂಬುವರಿಗೆ ಆನ್ ಲೈನ್ ಮೂಲಕ ಅಪರಿಚಿತ ವಂಚಿಸಿದ್ದಾನೆ.

ಮನೆ ಬಾಡಿಗೆಗೆ ಇದೆ ಎಂದು ಕೃಷ್ಣರಾಜ ಉಪಾಧ್ಯಾಯ 99 ಏಕರ್ಸ್ ವೆಬ್ ಸೈಟ್ ನಲ್ಲಿ ಜಾಹಿರಾತು ನೀಡಿದ್ದಾರೆ

ಇದನ್ನ ಗಮನಿಸಿದ ವಂಚಕ ತಾನು ಮಿಲಿಟರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮೈಸೂರಿಗೆ ವರ್ಗಾವಣೆ ಆಗಿದೆ ನಿಮ್ಮ ಮನೆಗೆ ಬಾಡಿಗೆಗೆ ಬರುತ್ತೇನೆ ಎಂದು ತಿಳಿಸಿದ್ದಾನೆ.

ವಂಚಕನ ಹೇಳಿದ್ದನ್ನು ಮತ್ತು ಆತ ನೀಡಿದ ನಕಲಿ ದಾಖಲೆಗಳನ್ನ ನಂಬಿದ ಕೃಷ್ಣರಾಜ ಉಪಾಧ್ಯಾಯ ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ನೀಡಿದ್ದಾರೆ.

ಅಡ್ವಾನ್ಸ್ ಹಣ ಗೂಗಲ್ ಪೇ ಮಾಡುವುದಾಗಿ ಹೇಳಿ ಮೊದಲು ಒಂದು ರೂ ಹಾಕಿ ನಂತರ ಖಾತೆಯ ಎಲ್ಲಾ ಮಾಹಿತಿ ಪಡೆದು 1.96 ಲಕ್ಷ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ.

ಈ ಸಂಬಂಧ ಕೃಷ್ಣರಾಜ ಉಪಾಧ್ಯಾಯ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Share this with Friends

Related Post