Mon. Dec 23rd, 2024

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಆಗ್ರಹಿಸಿ ಸಚಿವ ಮಹದೇವಪ್ಪಾಗೆ ಮನವಿ

Share this with Friends

ಮೈಸೂರು, ಫೆ.9: ಈ ಸಾಲಿನ ಬಜೆಟ್ ನಲ್ಲಿ ಮೈಸೂರು ಜಿಲ್ಲೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಘೋಷಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ರವರಿಗೆ
ಮನವಿ ಸಲ್ಲಿಸಲಾಯಿತು.

ಕರ್ನಾಟಕ ಸೇನಾ ಪಡೆ ವತಿಯಿಂದ ಈ ಸಾಲಿನ ರಾಜ್ಯ ಬಜೆಟ್ ನಲ್ಲಿ ಮೈಸೂರು ಜಿಲ್ಲೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಘೋಷಿಸಬೇಕೆಂದು ಇದೇ ಫೆಬ್ರವರಿ 5 ರಂದು ಪ್ರತಿಭಟನೆ ಮಾಡಲಾಗಿತ್ತು.

ನಂತರ ಮುಖ್ಯ ಮಂತ್ರಿ‌ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲಾಗಿತ್ತು.

ಅದೇ ರೀತಿ ಇಂದು ಮೈಸೂರಿಗೆ ಆಗಮಿಸಿದ್ದ ಉಸ್ತುವಾರಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಅವರಿಗೂ ಮನವಿ ಸಲ್ಲಿಸಿ ಮುಂದಿನ ವಾರದ ರಾಜ್ಯ ಬಜೆಟ್ ನಲ್ಲಿ ಮೈಸೂರಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಪ್ರಾರಂಬಿಸಲೇ ಬೇಕೆಂದು ಕೋರಲಾಯಿತು.

ಇದಕ್ಕೆ ಸಚಿವರು ಸ್ಪಂದಿಸಿದ್ದು,ಇದನ್ನು ಮುಖ್ಯ ಮಂತ್ರಿ ಗಳ ಗಮನಕ್ಕೆ ತಂದು ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ಸಿ. ಜಿ ಗಂಗಾಧರ್, ರಂಗೇಗೌಡ, ಸುಮಿತ್ರಾ ರಮೇಶ್, ಜಗದೀಶ್, ಲತ ರಂಗನಾಥ, ಶಿವಲಿಂಗಯ್ಯ ರವಿ ಒಲಂಪಿಯ, ಗಿರೀಶ್, ಕೃಷ್ಣಯ್ಯ ಮತ್ತಿತರರು ಸಚಿವರಿಗೆ ಮನವಿ ಸಲ್ಲಿಸಿದರು.


Share this with Friends

Related Post