Wed. Dec 25th, 2024

ಪ್ರಜ್ವಲ್‌ ರೇವಣ್ಣ ನಿವಾಸದಲ್ಲಿ ಎಫ್‌ಎಸ್ಎಲ್ ತಂಡ ಪರಿಶೀಲನೆ

Share this with Friends

ಹಾಸನ,ಮೇ.13: ಸಂಸದ ಪ್ರಜ್ವಲ್‌ ರೇವಣ್ಣ ಅವರ ನಿವಾಸಕ್ಕೆ ಎಫ್‌ಎಸ್ಎಲ್ ತಂಡ
ಆಗಮಿಸಿ‌ ಪರಿಶೀಲನೆ ನಡೆಸಿತು.

ಹಾಸನದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸಕ್ಕೆ ತಂಡ ಆಗಮಿಸಿ ಪರಿಶೀಲಿಸಿತು

ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿರುವ ಹಿನ್ನಲೆಯಲ್ಲಿ ಸಾಕ್ಷ್ಯ ಸಂಗ್ರಹಕ್ಕೆ ಎಫ್‌ಐಎಲ್
ಆಗಮಿಸಿತ್ತು.

ಸ್ಥಳೀಯ ಪೊಲೀಸರು ಕೂಡಾ ಎಫ್‌ಐಎಲ್
ತಂಡಕ್ಕೆ ಸಾಥ್ ನೀಡಿತು.ಅವರ ಸಮ್ಮುಖದಲ್ಲಿ ಸಂಸದರ ನಿವಾಸದ ಬೀಗ ತೆರೆದು ಒಳಪ್ರವೇಶಿಸಿದ ಎಫ್‌ಎಸ್‌ಎಲ್ ತಂಡ ಮನೆಯೊಳಗೆ ಎಲಲ್ಲೆಡೆ ಪರಿಶೀಲಿಸಿತು.

ಈಗಾಗಲೇ ಎಸ್‌ಐಟಿ ತಂಡ ಸಂತ್ರಸ್ತೆಯ ಸ್ಥಳ ಮಹಜರು ಮಾಡಿತ್ತು,ಇದೀಗ ಸಂಸದರ ಮನೆಯಲ್ಲಿ ಎಫ್‌ಎಸ್‌ಎಲ್ ತಂಡ ಕೂಡಾ ಪರಿಶೀಲಿಸಿತು.ಈ ವೇಳೆ ಸಂಸದರ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.


Share this with Friends

Related Post