ಮೈಸೂರು, ಫೆ.10: ಸಾಂಸ್ಕೃತಿಕ ರಾಜಧಾನಿಯಲ್ಲಿ ಪಂಚ ಗರುಡೋತ್ಸವ ಸಂಭ್ರಮ ಮನೆ ಮಾಡಿತ್ತು.
ಮೈಸೂರಿನ ಪಂಚ ಗರುಡೋತ್ಸವ ಸೇವಾ ಸಮಿತಿ ವತಿಯಿಂದ ಇದೇ ಪ್ರಥಮ ಬಾರಿಗೆ
ಪಂಚ ಗರುಡೋತ್ಸವ ಹಮ್ಮಿಕೊಳ್ಳಲಾಗಿತ್ತು.
ನೂರಾರು ಭಕ್ತರು ಪಾಲ್ಗೊಂಡು ಗರುಡೋತ್ಸವ ಕಣ್ ತುಂಬಿಕೊಂಡರು.
ನಗರದ ಕಾಳಿದಾಸ ರಸ್ತೆ ಈ ಯದುಗಿರಿ ಯತಿರಾಜ ಮಠ, ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪಂಚ ಗರುಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಉತ್ಸವದ ದಿವ್ಯ ಸಾನಿಧ್ಯವನ್ನು ಮೈಸೂರಿನ ಶ್ರೀ ಪರಕಾಲ ಮಠದ ಶ್ರೀಮದಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿಯವರು, ಮೇಲುಕೋಟೆ ಶ್ರೀ ಯದುಗಿರಿ ಯತಿರಾಜ ಮಠದ 41ನೇ ಪೀಠಾಧಿಪತಿಗಳಾದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು,ಮೈಸೂರು ಸುದರ್ಶನ ನಾರಸಿಂಹ ಕ್ಷೇತ್ರದ ಧರ್ಮಾಧಿಕಾರಿ ಭಾಷ್ಯಂ ಸ್ವಾಮೀಜಿ ಅವರು ವಹಿಸಿದ್ದರು.
ಪಂಚ ಗರುಡೋತ್ಸವ ಮೆರವಣಿಗೆಗೆ ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಉತ್ಸವದಲ್ಲಿ ಸಮಿತಿಯ ಗೌರವಾಧ್ಯಕ್ಷರೂ,ಶಾಸಕರಾದ ಶ್ರೀವತ್ಸ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಹಲವು ಗಣ್ಯರು ಪಾಲ್ಗೊಂಡಿದ್ದರು.