Fri. Nov 1st, 2024

ಪೆನ್ ಡ್ರೈವ್ ಪ್ರಕರಣ:ಜೆಡಿಎಸ್,ಬಿಜೆಪಿ ಮೈತ್ರಿಪರಿಷತ್ ಚುನಾವಣೆಗೆ ಪರಿಣಾಮ ಬೀರಲ್ಲ-ಸಿಎಂ

Share this with Friends

ಮೈಸೂರು,ಮೇ.14: ಪೆನ್ ಡ್ರೈವ್ ಪ್ರಕರಣವೇ ಆಗಲೀ,ಜೆಡಿಎಸ್ – ಬಿಜೆಪಿ ಮೈತ್ರಿಯಿಂದಲೇ ಆಗಲಿ ಪರಿಷತ್ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ‌ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ಯಾವ ತೊಂದರೆಯೂ ಆಗುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ವಾತಾವರಣ ಚೆನ್ನಾಗಿದೆ,
ಈ‌ ಬಾರಿ ನಮ್ಮ ಪಕ್ಷ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ತೆಗದುಕೊಂಡಿದೆ,ಹಾಗಾಗಿ 6 ತಿಂಗಳ ಮುನ್ನವೇ ಟಿಕೆಟ್ ಘೋಷಣೆ ಮಾಡಿದ್ದೆವು,
ಪೆನ್ ಡ್ರೈವ್ ಗೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಏನು ಮಾಡಿದೆ ಎಂಬುದನ್ನು ಮೊದಲು ತಿಳಿದುಕೊಂಡು ನಂತರ
ರಾಜ್ಯ ಸರ್ಕಾರ ಏನೇನು ಮಾಡಿದೆ ಎಂಬ ಬಗ್ಗೆ ತುಲನೆ ಮಾಡಲಿ,ಅದು ಬಿಟ್ಟು ಮೊದಲೇ ತುಲನೆ ಮಾಡುತ್ತಾರೆ ಎಂದು ಸಿದ್ದು ಟೀಕಿಸಿದರು.

ಕುಮಾರಸ್ವಾಮಿ ಬಳಿಯಿರುವ ಪೆನ್ ಡ್ರೈವ್ ವಿಚಾರ ಕುರಿತು ಮಾಧ್ಯಮದವರು ಕೇಳಿದ್ದಕ್ಕೆ
ಕುಮಾರಸ್ವಾಮಿ ಅವರದು ಅಲ್ ವೇಸ್ ಹಿಟ್ ಅಂಡ್ ರನ್ ಕೇಸ್ ಎಂದು ಟಾಂಗ್ ನೀಡಿದರು.

ಸರ್ಕಾರ ಪತನದ ಬಗ್ಗೆ ಒಂದು ವರ್ಷದಿಂದ ಹೇಳುತ್ತಿದ್ದಾರೆ‌,ಮಹಾರಾಷ್ಟ್ರ ಸಿಎಂ‌ ತಮ್ಮ ಸರ್ಕಾರವನ್ನ ಮೊದಲು ಉಳಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಮ್ಮಲ್ಲಿ ಒಳಜಗಳವೇ ಇಲ್ಲ,
ಒಳಗೂ ಇಲ್ಲ, ಹೊರಗೂ ಇಲ್ಲ,
ಜಗಳ ಇದ್ದರೇ ತಾನೇ ಬೀಳುವುದು.
ಜಗಳ ಇದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಈ ರೀತಿ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿತ್ತಾ ಎಂದು ಸಿಎಂ ಮಾಧ್ಯಮದವರನ್ನೇ ಪ್ರಶ್ನಿಸಿದರು.

ಲೋಕಸಭಾ ಚುನಾವಣೆ ಪ್ರಯುಕ್ತ
ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗುವ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ,
ನಾನು ಸಾಮಾನ್ಯವಾಗಿ ಯಾವಾಗಲೂ ಪ್ರಚಾರಕ್ಕೆ ಬೇರೆ ರಾಜ್ಯಗಳಿಗೆ ಹೋಗಿಲ್ಲ,
ಈ ಬಾರಿ ಸ್ಟಾರ್ ಪ್ರಚಾರಕ್ಕೆ ಕರೆದಿದ್ದಾರೆ,
ನಮ್ಮಲ್ಲೇ ಬಹಳಷ್ಟು ಬೇರೆ ಕೆಲಸಗಳಿವೆ ನೋಡೊಣಾ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


Share this with Friends

Related Post