Fri. Dec 27th, 2024

ದಕ್ಷಿಣ ಕಾಶಿ ನಂಜುಂಡೇಶ್ವರನ ಹುಂಡಿಯಲ್ಲಿ 1.72 ಕೋಟಿ ಸಂಗ್ರಹ

Share this with Friends

ನಂಜನಗೂಡು,ಮೇ.15: ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ 1.72 ಕೋಟಿ ರೂ ಸಂಗ್ರಹವಾಗಿದೆ.

ನಿನ್ನೆ ನಡೆದ ಹುಂಡಿ ಎಣಿಕೆ ಕಾರ್ಯ ದಲ್ಲಿ 1.72 ಕೋಟಿ ರೂ ನಗದು, 92 ಗ್ರಾಂ 50 ಮಿಲಿಗ್ರಾಂ ಚಿನ್ನ ಹಾಗೂ 3 ಕೆಜಿ 500 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ದೇವಾಲಯದ ದಾಸೋಹ ಭವನದ ಆವರಣದಲ್ಲಿ ಒಟ್ಟು 35 ಹುಂಡಿಗಳನ್ನು ತೆಗೆದು ಎಣಿಕೆ ಮಾಡಲಾಯಿತು.ಈ ವೇಳೆ 1.72, 85, 296 ರೂ ಸಂಗ್ರಹವಾಗಿದೆ,ಜತೆಗೆ 33 ವಿದೇಶಿ ಕರೆನ್ಸಿ ಸಹ ಕಾಣಿಕೆಯಾಗಿ ಬಂದಿದೆ.

ಹುಣ್ಣಿಮೆ ಸೇರಿದಂತೆ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರಿಂದ ಹುಂಡಿಯಲ್ಲಿ ಭಾರಿ ಮೊತ್ತದ ಹಣದ ಸಂಗ್ರಹವಾಗಿದೆ.

ಎಣಿಕೆ ಕಾರ್ಯದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸತೀಶ್, ವೆಂಕಟೇಶ್ ಪ್ರಸಾದ್‌, ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ವಿದುಲತಾ, ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಕಾರ್ತಿಕ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.


Share this with Friends

Related Post