Mon. Dec 23rd, 2024

ನೀವೇ ಗುಂಡು ಹೊಡೆಯಿರಿ:ಈಶೂಗೆ ಡಿ.ಕೆ ಸುರೇಶ್ ಸವಾಲು

Share this with Friends

ಬೆಂಗಳೂರು,ಫೆ.10: ಬೇರೆಯವರು ಗುಂಡು ಹೊಡೆಯುವುದು ಬೇಡ,ನಾನೇ ಈಶ್ವರಪ್ಪನವರ ಮನೆಗೆ ಹೋಗುತ್ತೇನೆ. ಅವರೇ ಗುಂಡು ಹೊಡೆಯಲಿ ಎಂದು ಸಂಸದ ಡಿ.ಕೆ.ಸುರೇಶ್ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಮಹಾತ್ಮ ಗಾಂಧಿಯವರನ್ನ ಕೊಂದ ಪಕ್ಷ ಅವರದ್ದು, ನಾನೊಬ್ಬ ಸಣ್ಣ ವ್ಯಕ್ತಿ,ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ‌ ಹೀಗೆ ಹೇಳಿರಬಹುದೇನೊ ಎಂದರು.

ಬಿಜೆಪಿಯಲ್ಲಿ ಈಶ್ವರಪನವರನ್ನ ಮೂಲೆ ಗುಂಪು ಮಾಡಿದ್ದಾರೆ,ಅದಕ್ಕೆ ಈಗ ಗಮನ ಸೆಳೆಯಲು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಈಶ್ವರಪ್ಪ ನಿಮ್ಮ ನಾಯಕರಿಂದ ನೀವೇ ಶಬ್ಬಾಷ್ ಗಿರಿ ತೆಗೆದುಕೊಳ್ಳಿ. ನಾನೇ ಸಮಯ ಕೊಡುವೆ, ಒಂದು ವಾರದಲ್ಲಿ ಯಾವಾಗ ಅಂತ ಹೇಳ್ತೀನಿ, ಅವರ ಮನೆಗೆ ನಾನೇ ಹೋಗ್ತೀನಿ ಅವರೇ ಗುಂಡು ಹೊಡೆಯಲಿ ಎಂದು ಹೇಳಿದರು.

ಬಡವರ ಮಕ್ಕಳನ್ನ ಹೇಳಿಕೆ ಮೂಲಕ ರೊಚ್ಚಿಗೆಬ್ಬಿಸುವುದು ಬೇಡ, ಅಲ್ಲಿ ಇಲ್ಲಿ ಯಾಕೆ ಹುಡುಕುತ್ತೀರಾ, ನಾನೇ ನಿಮ್ಮ ಮನೆಗೆ ಬರುತ್ತೇನೆ ನಿಮ್ಮನ್ನ ಭೇಟಿ ಮಾಡ್ತೀನಿ ಸಿದ್ಧರಾಗಿ.

ಗುಂಡು ಹಾಕ್ತೀರಾ, ಕೊಲ್ತೀರಾ ನೋಡೋಣ ಎಂದು ಡಿ.ಕೆ ಸುರೇಶ್‌ ಸವಾಲು ಹಾಕಿದರು.


Share this with Friends

Related Post