Tue. Dec 24th, 2024

ಮೈಸೂರು ನ್ಯಾಯಾಲಯದ ಆವರಣದಲ್ಲಿ ಆಚಾರ್ಯತ್ರಯರ ಜಯಂತಿ

Share this with Friends

ಮೈಸೂರು,ಮೇ.16: ವಕೀಲರ ಸಂಘ ಹಾಗೂ ಕರ್ನಾಟಕ ವಿಪ್ರ ವಕೀಲರ ಟ್ರಸ್ಟ್ ಸಹಯೋಗದೊಂದಿಗೆ ನ್ಯಾಯಾಲಯದ ಆವರಣದಲ್ಲಿ ಆಚಾರ್ಯತ್ರಯರ ಜಯಂತಿ ಹಮ್ಮಿಕೊಳ್ಳಲಾಯಿತು.

ಶ್ರೀ ಶಂಕರಾಚಾರ್ಯರು,ಶ್ರೀ ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚಾರ್ಯತ್ರಯರ ಜಯಂತಿಯನ್ನು ಆಚರಿಸಲಾಯಿತು.

ಮುಖ್ಯ ಭಾಷಣವನ್ನು ಹೆಸರಾಂತ ವಕೀಲರಾದ ಮೇದಪ್ಪ ಹಾಗೂ ಎನ್ ಪ್ರಭಾಕರ್ ಮಾಡಿ,ಆಚಾರ್ಯ ತ್ರಯರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದು ಹೇಳಿದರು.

ಹಿರಿಯ ವಕೀಲರಾದ
ಎ.ಎಸ್. ನಟರಾಜ್, ಪಿ ಡಿ ಮೇದಪ್ಪ, ಕೆ.ಆರ್. ಶಿವಶಂಕರ್, ವಿ ಮೈಥಿಲಿ, ಎಂ ಎಸ್ ಸಾವಿತ್ರಿ, ವರದರಾಜು, ದುರ್ಗಾ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಸುಧೀರ್, ವಿಪ್ರ ವಕೀಲರ ಟ್ರಸ್ಟ್ ಅಧ್ಯಕ್ಷ ಸಂಗಮೇಶ್ವರ, ರವಿಚಂದ್ರನ್, ಶಿವಶಂಕರ್, ಲಕ್ಷ್ಮಿ, ಜಯಶ್ರೀ ಶಿವರಾಮ್, ಲಕ್ಷ್ಮಿ ಪ್ರಸಾದ್, ಬಾಲಕೃಷ್ಣ, ರಾಜಲಕ್ಷ್ಮಿ, ಬೆಂಗಳೂರಿನ ಹೈಕೋರ್ಟ್ ವಕೀಲರಾದ ದುರ್ಗಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post