Mon. Dec 23rd, 2024

ಸ್ಕ್ರೂಡ್ರೈವರನಿಂದ ಯುವಕನ ಕೊಲೆ ಮಾಡಿದ ಹುಡಗಿಯ ಅಣ್ಣ

Share this with Friends

ಬೆಳಗಾವಿ:ಹುಡಗಿಯನ್ನು ಮನಸಾರೆ ಪ್ರೀತಿ ಮಾಡತ್ತಿದ್ದ. ಹುಡಗನನ್ನು ಹುಡಗಿಯ ಅಣ್ಣ ಸ್ಕ್ರೂ ಡ್ರೈವರನಿಂದ ಚುಚ್ಚಿ ಕೊಲೆ ‌ಮಾಡಿದ ಘಟನೆ ನಗರದ ಮಹಾಂತೇಶ ನಗರ ಸೇತುವೆ ಹತ್ತಿರ ಗುರುವಾರ ನಡೆದಿದೆ.ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ(22) ಕೊಲೆಯಾದ ದುರ್ದೈವಿ.

ಇಬ್ರಾಹಿಂ ಗಾಂಧಿನಗರದ ಯುವತಿಯನ್ನು ಪ್ರೀತಿಸುತ್ತಿದ್ದ ಗುರುವಾರ ಮಧ್ಯಾಹ್ನ ಯುವತಿಯನ್ನು ಬೈಕನಲ್ಲಿ ಕುಡಿಸಕೊಂಡು ಹೋಗುತ್ತಿದ್ದಿದ್ದು ಯುವತಿ ಸಹೋದರ ಮುಜಮಿಲ್ ಸತ್ತಿಗೇರಿ ನೋಡಿದ ಹಿನ್ನಲೆಯಲ್ಲಿ ಯುವಕನನ್ನು ಸ್ಕ್ರೂ ಡ್ರೈವರನಿಂದ ಚುಚ್ಚಿ ಈ ಕೊಲೆ ಮಾಡಲು ಕಾರಣ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

ತಕ್ಷಣ ಇಬ್ರಾಹಿಂ ಗೌಸ್ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದರು ಸಹ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ಮುಜಮಿಲನ್ನು ಪೊಲೀಸರು ಬಂಧಿಸಿದ್ದಾರೆ. ಮಾಳಮಾರುತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this with Friends

Related Post