Mon. Dec 23rd, 2024

ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಹೆಚ್.ಡಿ.ರೇವಣ್ಣ

Share this with Friends

ನಂಜನಗೂಡು,ಮೇ.17: ಜಾಮೀನಿನ ಮೇಲೆ ಬಿಡುಗಡೆಯಾದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ದೇವಾಲಯ ದರ್ಶನ ಮುಂದುವರೆಸಿದ್ದಾರೆ.

ನಾಡದೇವಿ ಚಾಮುಂಡೇಶ್ವರಿ ದರುಶನ ಪಡೆದಿದ್ದ ಅವರು ಇದೀಗ ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ದರುಶನ ಪಡೆಯಲು ನಂಜನಗೂಡಿಗೆ ಆಗಮಿಸಿದರು.

ನಂಜುಂಡೇಶ್ವರನ ದರ್ಶನ ಪಡೆದ ನಂತರ ಪಾರ್ವತಮ್ಮ, ಚಂಡಿಕೇಶ್ವರ, ಗಣಪತಿ, ಸುಬ್ರಮಣ್ಯ, ನಾರಾಯಣಸ್ವಾಮಿ ದೇವಾಲಯಗಳಿಗೆ ತೆರಳಿ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದರು.

ರೇವಣ್ಣ ಅವರೊಂದಿಗೆ ಕೆಲವು ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.


Share this with Friends

Related Post