Mon. Dec 23rd, 2024

ಇಂಡಿಯಾ ಮೈತ್ರಿಕೂಟಕ್ಕೆ 300 ಸ್ಥಾನ;ಎನ್‌ಡಿಎ ಗೆ 200:ಡಿಕೆಶಿ‌ ಭವಿಷ್ಯ

Share this with Friends

ಲಖನೌ,ಮೇ.17: ಲೋಕಸಭಾ ಚುನಾವಣೆಯಲ್ಲಿ ಐಎನ್‌ ಡಿ ಐಎ ಮೈತ್ರಿಕೂಟ ಸುಮಾರು 300 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಉತ್ತರ ಪ್ರದೇಶದ ಲಖನೌದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿಕೆಶಿ, ಇಂಡಿಯಾ ಮೈತ್ರಿಕೂಟ ಸುಮಾರು 300 ಸ್ಥಾನಗಳನ್ನು ಗೆಲ್ಲುತ್ತದೆ, ಎನ್‌ಡಿಎ 200 ರ ಆಸುಪಾಸಿನಲ್ಲಿರುತ್ತದೆ ಎಂದು ‌ಭವಿಷ್ಯ ನುಡಿದರು.

ನಾವು ಸಾಮೂಹಿಕ ನಾಯಕತ್ವವನ್ನು ನಂಬುತ್ತೇವೆ, ಚುನಾವಣೆಯಲ್ಲಿ ಗೆಲ್ಲುತ್ತೇವೆ ಮತ್ತು ಸರ್ಕಾರ ರಚಿಸಲು ಹಾಗೂ ಪ್ರಧಾನಿ ಆಯ್ಕೆಗೆ ಒಟ್ಟಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಈ ಹಿಂದೆಯೂ ಯುಪಿಎ ಅಧಿಕಾರಕ್ಕೆ ಬಂದಾಗ ಎಲ್ಲಾ ಸಂಸದರು ಸೋನಿಯಾ ಗಾಂಧಿ ದೇಶದ ಪ್ರಧಾನಿಯಾಗಬೇಕೆಂದು ಬಯಸಿದ್ದರು,ನಾವು ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರಿಗೂ ಪತ್ರ ನೀಡಿದ್ದೆವು, ಆದರೆ ಸೋನಿಯಾ ಗಾಂಧಿಯವರು ದೇಶವನ್ನು ಉಳಿಸಲು ಸಿಖ್ ವ್ಯಕ್ತಿ, ಅರ್ಥಶಾಸ್ತ್ರಜ್ಞಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು ಎಂದು ತಿಳಿಸಿದರು.

ಕಪ್ಪುಹಣ, ರೈತರ ಆದಾಯ ಮತ್ತು ನಿರುದ್ಯೋಗಕ್ಕೆ ಬಿಜೆಪಿ ನಾಯಕರು ಹೊಣೆಗಾರರಾಗಬೇಕು ಎಂದು ಹೇಳಿದರು.

ಮರಳಿ ತರಬೇಕಾಗಿದ್ದ ಕಪ್ಪುಹಣ ಎಲ್ಲಿದೆ ಬಿಜೆಪಿ ಭರವಸೆ ನೀಡಿದಂತೆ ರೈತರ ಆದಾಯವನ್ನು ಏಕೆ ದ್ವಿಗುಣಗೊಳಿಸಲಿಲ್ಲ, ನಮ್ಮ ಯುವಕರಿಗೆ ಭರವಸೆ ನೀಡಿದ 2 ಕೋಟಿ ಉದ್ಯೋಗಗಳು ಎಲ್ಲಿ ಎಂದು ಡಿ.ಕೆ ಶಿವಕುಮಾರ್ ಕಾರವಾಗಿ ಪ್ರಶ್ನಿಸಿದರು.


Share this with Friends

Related Post