Mon. Dec 23rd, 2024

ಸಾಂಪ್ರದಾಯಿಕ ಆತ್ಮರಕ್ಷಣಾ ಕಲೆ ಉಳಿಸಿ-ಈಶ್ವರ ಖಂಡ್ರೆ ಕರೆ

Share this with Friends

ಸುತ್ತೂರು, ಫೆ.11: ಕುಸ್ತಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಈ ಸಾಂಪ್ರಾದಾಯಿಕ ಆತ್ಮರಕ್ಷಣಾ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕುಸ್ತಿ ಪಟುಗಳ ಬೆನ್ನುತಟ್ಟಿ ಸಾಂಪ್ರದಾಯಿಕ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಅವರು ಕುಸ್ತಿಗೆ ಭಾರತದಲ್ಲಿ ಭವ್ಯ ಇತಿಹಾಸವಿದೆ, ನಮ್ಮ ದೇಶೀ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ನಂದಿಕಂಬ ಇತ್ಯಾದಿ
ಮರೆಯಾಗುತ್ತಿದೆ,ಇವುಗಳನ್ನು ಮತ್ತೆ ಜನಪ್ರಿಯಗೊಳಿಸಬೇಕು ಎಂದು ಹೇಳಿದರು.

ಕುಸ್ತಿ, ಗರಡಿ ಮನೆಯಲ್ಲಿನ ಕಸರತ್ತು ನಮ್ಮ ಆರೋಗ್ಯವನ್ನು ಸದೃಢವಾಗಿಡುತ್ತದೆ. ಹಿಂದೆ ಪ್ರತಿ ಗ್ರಾಮದಲ್ಲಿ ವ್ಯಾಯಾಮ ಶಾಲೆ ಇರುತ್ತಿತ್ತು, ಯುವಕರು ಕಸರತ್ತು ಮಾಡುತ್ತಿದ್ದರು. ಇಂದಿನ ಮಕ್ಕಳು ಮೊಬೈಲ್ ನಲ್ಲಿ ಕಳೆದು ಹೋಗುತ್ತಿದ್ದಾರೆ ಎಂದು ಬೇಸರಪಟ್ಟರು.

ಪ್ರತಿಯೊಂದು ಮಗುವಿಗೂ ದೈಹಿಕ ಆರೋಗ್ಯದ ಮಹತ್ವ ತಿಳಿಸಬೇಕು,
ಎಲ್ಲರೂ ನಿಯಮಿತವಾಗಿ ಯೋಗ, ವ್ಯಾಯಾಮ, ವಾಯು ವಿಹಾರ ಇತ್ಯಾದಿ ಉತ್ತಮ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಖಂಡ್ರೆ ಸಲಹೆ ನೀಡಿದರು.

ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಗಣೇಶ್ ಪ್ರಸಾದ್, ದೇವೇಂದ್ರಪ್ಪ ಮತ್ತು ಮಾಜಿ ಶಾಸಕ ಡಾ. ಯತೀಂದ್ರ ಮತ್ತಿತರರು ಹಾಜರಿದ್ದರು.


Share this with Friends

Related Post