Fri. Nov 1st, 2024

ವಿಕಲಚೇತನ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಿ ಪುತ್ರಿಯ ಜನ್ಮದಿನ ಆಚರಿಸಿದ ದಂಪತಿ

Share this with Friends

ಮೈಸೂರು, ಮೇ.17: ಬೆಂಗಳೂರು ಮೂಲದ ಡಾ ಪ್ರದೀಪ್ ಮತ್ತು ಪೂಜಾ ಅವರ ಪುತ್ರಿ ಆರಾಧ್ಯ ಹುಟ್ಟುಹಬ್ಬವನ್ನು ವಿಕಲಚೇತನ ಮಕ್ಕಳಿಗೆ ಸಹಾಯ ಮಾಡಿ ವಿಶೇಷವಾಗಿ ಆಚರಿಸಲಾಯಿತು.

ಮೈಸೂರಿನ ಶಿವರಾಂಪುರದ ನವಚೇತನ ಬಸವೇಶ್ವರ ಟ್ರಸ್ಟ್ ನಲ್ಲಿರುವ ವಿಕಲಚೇತನ ಮಕ್ಕಳಿಗೆ ಸುಮಾರು ಒಂದು ಲಕ್ಷ ಮೌಲ್ಯದ ವಸ್ತುಗಳನ್ನು ನೀಡುವ ಮೂಲಕ ದಂಪತಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಕಾಂಗ್ರೆಸ್ ಮುಖಂಡ ಹೆಚ್.ವಿ.ರಾಜೀವ್ ಅವರು ವಸ್ತುಗಳನ್ನು ಹಸ್ತಾಂತರ ಮಾಡಿ ಮಾತನಾಡಿದರು.

ಹುಟ್ಟುಹಬ್ಬ ಎಂದರೆ ಮೋಜು ಮಸ್ತಿ ಎನ್ನುವ ಈ ಕಾಲಘಟ್ಟದಲ್ಲಿ ಪುಟಾಣಿ ಆರಾಧ್ಯಳ ಹುಟ್ಟುಹಬ್ಬವನ್ನು ಈ ರೀತಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ‌ ವ್ಯಕ್ತಪಡಿಸಿದರು.

ಎಲ್ಲರು ತಮ್ಮ ಹುಟ್ಟುಹಬ್ಬವನ್ನು ಇಂತಹ ಮಕ್ಕಳೊಂದಿಗೆ ಆಚರಿಸಿ ಎಂದು ರಾಜೀವ್ ಸಲಹೆ ನೀಡಿದರು.

ಮೂರು ವರ್ಷಗಳಿಂದ ಇತರ ವಿಶೇಷ ಮಕ್ಕಳ ಶಾಲೆಗಳನ್ನು ಹುಡುಕಿ ಅವರಿಗೆ ಅವಶ್ಯವಿರುವ ವಸ್ತುಗಳನ್ನು ನೀಡಲು ಸಹಕರಿಸುತ್ತಿರುವ ರಂಗನಾಥ ಅವರ ಸೇವೆ ಶ್ಲಾಘನೀಯ ಎಂದು ತಿಳಿಸಿದರು.

ಇದೇ‌ ವೇಳೆ ಈ ಮಕ್ಕಳ ನೆರವಿಗೆ ತಾವೂ ಕೂಡ ಐವತ್ತು ಸಾವಿರ ರೂ ಕೊಡುಗೆಯಾಗಿ ನೀಡುವುದಾಗಿ ರಾಜೀವ್ ಪ್ರಕಟಿಸಿ ಮಾದರಿಯಾಗಿದ್ದಾರೆ.

ಟ್ರಸ್ಟ್ ಅಧ್ಯಕ್ಷ ಮರಿಗೌಡ ಮಾತನಾಡಿ,ನಮ್ಮಲ್ಲಿರುವ ಮಕ್ಕಳಿಗೆ ಊಟ ತಿಂಡಿ ಮಕ್ಕಳನ್ನು ಕರೆದೊಯ್ಯುವ ವಾಹನಕ್ಕೆ ಪೆಟ್ರೋಲ್ ಅಥವ ಬೇರೆ ಏನಾದರು ಕೊಡುಗೆ ನೀಡಬೇಕಾದಲ್ಲಿ ದಯಮಾಡಿ 88614 87299 ಸಂಪರ್ಕಿಸಬೇಕೆಂದು ಮನವಿ ಮಾಡಿದರು.

ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕ ರಂಗನಾಥ ಮಾತನಾಡಿ, ಬೆಂಗಳೂರಿನಲ್ಲಿ ನೆಲೆಸಿರುವ ಡಾ.ಪೂಜಾ, ಡಾ. ಪ್ರದೀಪ್ ದಂಪತಿ ಪುತ್ರಿ ಆರಾಧ್ಯಳ ಮೂರನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಮಕ್ಕಳ ಶಾಲೆಗೆ ಕಮರ್ಷಿಯಲ್ ಗ್ಯಾಸ್ ಸ್ಟವ್, ಜಮ್ಕಾನ, ಮೂರು ವಾಕರ್, ಒಂದು ವೀಲ್ ಚೇರ್, ಎಲ್ಲಾ ಮಕ್ಕಳಿಗೂ ಚಪ್ಪಲಿ ಹಾಗೂ ದಿನಸಿ ವಸ್ತುಗಳನ್ನು ನೀಡಿ ಮಾದರಿಯಾಗಿದ್ದಾರೆ,ಎಲ್ಲರೂ
ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬುದು ನಮ್ಮೆಲ್ಲರ ಆಶಯ ಎಂದು ಹೇಳಿದರು.

ಈ ವೇಳೆ ಸಾಲುಂಡಿ ಮಾಜಿ ಅಧ್ಯಕ್ಷರು ಬಸಪ್ಪ, ಸಿದ್ದಣ್ಣ, ಸಿದ್ದರಾಮು, ರಾಮು, ಪ್ರಶಾಂತ್, ಶೇಷ ಪ್ರಸಾದ್, ವಿಕ್ರಮ ಅಯ್ಯಂಗಾರ್,ಪ್ರಕಾಶ್ ಪ್ರಿಯದರ್ಶನ್, ಜಯಂತ್, ಎಸ್. ಎನ್ ರಾಜೇಶ್, ರಾಕೇಶ್,ನಿತಿನ್ ಮತ್ತಿತರರು ಹಾಜರಿದ್ದರು.


Share this with Friends

Related Post