ಮೈಸೂರು, ಫೆ.11: ಮೈಸೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂದಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ವಿಶಿಷ್ಟ ಪ್ರತಿಭಟನೆ ನಡೆಸಿದರು.
ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ತಲೆಗೆ ಕಪ್ಪುಬಣ್ಣದ ಪಟ್ಟಿ ಕಟ್ಟಿಕೊಂಡು ವಿವಿಧ ರೀತಿಯ ಪಾಂಪ್ಲೆಟ್ ಹಿಡಿದು ಪ್ರತಿಭಟನೆ ನಡೆಸಿದರು.
‘ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರಾ, ಕರ್ನಾಟಕಕ್ಕೆ ಆದ ನಷ್ಟ 35,162 ಕೋಟಿ, ಬರಪೀಡಿತ ತಾಲೂಕುಗಳ ಸಂಖ್ಯೆ 223, ಕರ್ನಾಟಕ ಕೇಳಿದ ಪರಿಹಾರ 18171 ಕೋಟಿ, ಕೇಂದ್ರ ಸರ್ಕಾರ ಪರಿಹಾರದಲ್ಲಿ ಕೊಟ್ಟಿದ್ದು ಸೊನ್ನೆ’.
ಅಮಿತ್ ಶಾ ಅವರಿಗೆ ಆದರೂ ಸ್ವಾಗತ. ಕನ್ನಡ ನಾಡಲ್ಲಿ ಆತಿಥ್ಯಕ್ಕೇನು ಬರವಿಲ್ಲ, ದ್ರೋಹಿಗಳನ್ನು ಸಹಿಸೋಕೆ ಇಲ್ಯಾರಿಗೂ ಮರೆವಿಲ್ಲ, ಅಮಿತ್ ಷಾ ಮೈಸೂರು ಭೇಟಿ- ಮೈಸೂರೇ ವಿರೋಧ– ಹೀಗೆ ಪಾಂಪ್ಲೆಟ್ ಗಳನ್ನು ಮುದ್ರಿಸಿ, ಕಾಂಗ್ರೆಸ್ ಕಾರ್ಯಕರ್ತರು ಗೋಡೆಗಳ ಮೇಲೆ ಅಂಟಿಸಿ ಪ್ರತಿಭಟನೆ ನಡೆಸಿದರು.
ಮೈಸೂರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ(ಮೆಟ್ರೋಪೋಲ್ ಸರ್ಕಲ್)ಉದ್ದಕ್ಕೂ ಗೋಡೆಗಳಿಗೆ ಕಾಂಗ್ರೆಸ್ ಸದಸ್ಯರು ಪಾಂಪ್ಲೆಟ್ ಗಳನ್ನು ಅಂಟಿಸಿ ಘೋಷಣೆಗಳನ್ನು ಕೂಗಿದರು.
ವಿಶಿಷ್ಟ ರೀತಿಯ ಪ್ರತಿಭಟನೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ ಹಾಗೂ ಜಿಲ್ಲಾಧ್ಯಕ್ಷ ವಿಜಯಕುಮಾರ್ ನೇತೃತ್ವದಲ್ಲಿ ನಡೆಯಿತು. ಹಲವಾರು ಮಂದಿ ಕಾಂಗ್ರೆಸ್ಸಿಗರು ಭಾಗವಹಿಸಿದ್ದರು.