ಬೆಂಗಳೂರು, ಮೇ.18: ಬೆಂಗಳೂರಿಗರಿಗೆ ಸಿಹಿಸುದ್ದಿ ಒಂದಿದೆ,ಅದೇನಂದರೆ ಯಾವುದೇ ಕ್ಲಿಷ್ಟಕರ ಕಾಯಿಲೆ ಇದ್ದರೂ ಅದಕ್ಕೆ ತಜ್ಞರಿಂದ ಸೂಕ್ತ ಸಲಹೆ,ಮಾಹಿತಿ ದೊರೆಯಲಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈದ್ಯಕೀಯ ಲೋಕವೇ ಅನಾವರಣಗೊಂಡಿದ್ದು, ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಮೇ 17ರಿಂದ ಮೂರು ದಿನಗಳ ಕಾಲ ಅಂತರರಾಷ್ಟ್ರೀಯ ವೈದ್ಯಕೀಯ ಎಕ್ಸಿಬಿಷನ್ ಕಾನ್ಫರೆನ್ಸ್ ಪ್ರಾರಂಭವಾಗಿದೆ.
ಶುಕ್ರವಾರ ಆರಂಭವಾಗಿರುವ ಈ ವಸ್ತು ಪ್ರದರ್ಶನ ಮತ್ತು ಕಾನ್ಫರೆನ್ಸ್ ಇಂದು ಮತ್ತು ನಾಳೆಯೂ ಮುಂದುವರೆಯಲಿದೆ.
ಈ ಕಾನ್ಫರೆನ್ಸ್ ನಲ್ಲಿ ವೈದ್ಯಕೀಯ ಜಗತ್ತಿಗೆ ಸವಾಲಾಗಿರುವ ಅನೇಕ ಕಾಯಿಲೆಗಳನ್ನು ಗುಣಪಡಿಸುವ ತಜ್ಞರು ಆಗಮಿಸಿ ಸಲಹೆ ಸೂಚನೆ, ಮಾಹಿತಿ ನೀಡುವರು.
ಅಲ್ಲದೆ ವೈದ್ಯಕೀಯ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಆಪರೇಷನ್ ಥಿಯೇಟರ್ ಗಳಲ್ಲಿ ಬಳಸುವ ಅತ್ಯಾಧುನಿಕ ಸಲಕರಣೆಗಳನ್ನು ವೀಕ್ಷಿಸಬಹುದಾಗಿದೆ.
ಕಿವಿ, ಮೂಗು, ಗಂಟಲು, ಕಣ್ಣು, ಮೆದುಳು ಜಠರ ಇತ್ಯಾದಿ ಎಲ್ಲಾ ಸಮಸ್ಯೆಗಳನ್ನು ಪತ್ತೆ ಹಚ್ಚುವ ಅತ್ಯಾಧುನಿಕ ಯಾಂತ್ರಿಕ ಸಲಕರಣೆಗಳು ಪ್ರದರ್ಶನ ಮತ್ತು ಮಾರಾಟಕ್ಕೂ ಇಡಲಾಗಿದೆ.
ನೂತನವಾಗಿ ಹೈಟೆಕ್ ಆಸ್ಪತ್ರೆ ನಿರ್ಮಿಸಿರುವವರು ಇಲ್ಲಿ ಎಲ್ಲಾ ವೈದ್ಯಕೀಯ ಯಂತ್ರಗಳು ಮತ್ತು ಸಲಕರಣೆಗಳ ಬಗ್ಗೆ ತಿಳಿದು ವಿಚಾರಿಸಿ ಖರೀದಿಸಬಹುದಾಗಿದೆ.
ಜಗತ್ತಿನ ವಿವಿಧ ಹಲವು ಕಂಪನಿಗಳ ಅತ್ಯುತ್ತಮ ಸಲಕರಣೆಗಳು ಇಲ್ಲಿ ಕಾಣಸಿಗುತ್ತವೆ.
ವಿಶ್ವದ ನುರಿತ ತಜ್ಞ ವೈದ್ಯರು ಇಲ್ಲಿ ಆಗಮಿಸಿ ವಿಶೇಷ ಕಾಯಿಲೆಗಳ ಬಗ್ಗೆ ಬಗೆಹರಿಸುವ ಗುಣಪಡಿಸುವ ಬಗ್ಗೆ ತಿಳುವಳಿಕೆ ನೀಡಲಿದ್ದಾರೆ.
ಜಿಎಂಎಸಿ 2024 ಈ ಅಂತರಾಷ್ಟ್ರೀಯ ವೈದ್ಯಕೀಯ ಪ್ರದರ್ಶನ ಮತ್ತು ಮೇಳವನ್ನು
ಸುಂದರ್ ರಾಜನ್ ಅವರು ಆಯೋಜಿಸಿದ್ದು ಇದು ಅತ್ಯಂತ ಉಪಯುಕ್ತ ಮೇಳವಾಗಿದೆ.