ಮೈಸೂರು, ಮೇ.18: ಕೇಂದ್ರ ಸಚಿವರು, ಸಂಸದರಾಗಿದ್ದ ದಿವಂಗತ ವಿ, ಶ್ರೀನಿವಾಸ್ ಪ್ರಸಾದ್ ಅವರಿಗೆ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು.
ಕೇಂದ್ರ ಸಚಿವರು, ಸಂಸದರಾಗಿದ್ದ ವಿ, ಶ್ರೀನಿವಾಸ್ ಪ್ರಸಾದ್ ಅವರು ದಿಟ್ಟ, ನೇರ ಮತ್ತು ಅಧಿಕಾರಕ್ಕಾಗಿ ರಾಜಿಯಾಗದ, ತತ್ವ ಸಿದ್ಧಾಂತಗಳ ತೀರ್ಮಾನಗಳಿಂದ ಮೇರು ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯ ಪ್ರಕಾಶ್ ನುಡಿದರು
ಇಂದು ದೊಡ್ಡ ಗಡಿಯಾರ ಮುಂಭಾಗ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ರವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ನಾನು ಸಹ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದೆ, ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡರು ಮಾತನಾಡಿ ನನಗೆ 30 ವರ್ಷಗಳ ಹಿಂದೆಯೇ ನೀವು ವಿಧಾನಸೌಧದ ಮೆಟ್ಟಿಲು ಹತ್ತುತ್ತೀರಿ ಎಂದು ಶ್ರೀನಿವಾಸ್ ಪ್ರಸಾದ್ ಆಶೀರ್ವದಿಸಿದ್ದರು ಎಂದು ಸ್ಮರಿಸಿದರು.
ಶ್ರೀನಿವಾಸ್ ಪ್ರಸಾದ್ ಅವರು ಒಬ್ಬ ಆದರ್ಶವಾದಿ ತತ್ವ ಸಿದ್ಧಾಂತಗಳುಳ್ಳ ನೇರ ರಾಜಕಾರಣಿ ಎಂದು ಹೇಳಿದರು.
ಡಾ. ರಾಜ್ ಅಭಿಮಾನಿಗಳ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎನ್ ರಾಮೇ ಗೌಡರು ಮಾತನಾಡಿ ಕಾವೇರಿ ನೀರಿಗಾಗಿ ಕಾವೇರಿ ಕ್ರಿಯಾ ಸಮಿತಿ ನಿರಂತರ ಹೋರಾಟ ನಡೆಸಬೇಕೆಂದು ಮನವಿ ಮಾಡಿದರು.
ಮೆಲ್ಲಹಳ್ಳಿ ಮಾದೇಸ್ವಾಮಿ,
ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲೆಯ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್,
ಮೂಗೂರು ನಂಜುಂಡಸ್ವಾಮಿ,ಕಾವೇರಿ ಕ್ರಿಯಾ ಸಮಿತಿಯ ಕಾರ್ಯದರ್ಶಿ
ತೇಜೇಶ್ ಲೋಕೇಶ್ ಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಂ.ಜೆ ಸುರೇಶ್ ಗೌಡ, ಸೋಮಶೇಖರ್ ,ಬೋಗಾದಿ ಸಿದ್ದೇಗೌಡ, ಕೃಷ್ಣೇಗೌಡ, ಹೋಟೆಲ್ ಸಂಘದ ಅಧ್ಯಕ್ಷ ನಾರಾಯಣ ಗೌಡ, ಸಿಂಧುವಳ್ಳಿ ಶಿವಕುಮಾರ್, ರವೀಶ್, ಡಿಪಿಕೆ, ಸುರೇಶ್ ಗೋಲ್ಡ್ ಶಿವಲಿಂಗಯ್ಯ, ಪ್ರಭುಶಂಕರ, ರಾಜಶೇಖರ್, ಹೊನ್ನೇಗೌಡ , ಹನುಮಂತಯ್ಯ , ಕೃಷ್ಣಪ್ಪ, ಹನುಮಂತೇಗೌಡ, ಹನುಮಂತಯ್ಯ, ಮಂಜುಳಾ, ನೇಹಾ, ಪುಷ್ಪವತಿ, ವನಿತ, ಬಿಳಿಕೆರೆ ಸೌಭಾಗ್ಯ,ಆಟೋಮಹದೇವ್, ಅಶೋಕ್, ಭಾಗ್ಯಮ್ಮ, ಅಕ್ಬರ್, ವಿಷ್ಣು, ಪ್ರಭಾಕರ್ ಸುಬ್ಬೇಗೌಡ, ಮಹೇಶ್, ವಿಜಯೇಂದ್ರ ಮತ್ತಿತರರು ಉಪಸ್ಥಿತರಿದ್ದರು.