ಮೈಸೂರು, ಮೇ.18: ನಾಡಿನಾದ್ಯಂತ ಇಂದು ವಾಸವಿ ಜಯಂತಿಯನ್ನು ಆರ್ಯ ವೈಶ್ಯ ಜನಾಂಗದವರು ವಿಜೃಂಭಣೆಯಿಂದ ಆಚರಿಸಿದರು.
ವೈಶಾಖ ಮಾಸ ಶುಕ್ಲ ಪಕ್ಷ ವಸಂತ ಋತುವಿನಲ್ಲಿ ವಾಸವಿ ಜಯಂತಿ ಆಚರಿಸಲಾಗುತ್ತದೆ.ಮೈಸೂರು,ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಸವಿ ಜಯಂತಿ ಆಚರಿಸಲಾಯಿತು.
ವಾಸವಿ ದೇವಿಯನ್ನು ಕನ್ಯಕಾ ಪರಮೇಶ್ವರಿ ಎಂಬ ಹೆಸರಿನಿಂದಲೂ ಭಕ್ತರು ಕರೆಯುತ್ತಾರೆ.ಕೇವಲ ಆರ್ಯವೈಶ್ಯ ಜನಾಂಗದವರಷ್ಟೇ ಅಲ್ಲಾ ಎಲ್ಲ ಹಿಂದೂ ಮಹಿಳೆಯರು ಈ ದೇವಿಯನ್ನು ಪೂಜಿಸುತ್ತಾರೆ.
ಮೈಸೂರಿನ ಜೆಪಿ ನಗರದಲ್ಲಿರುವ ವಾಸವಿ ಪ್ರಾರ್ಥನಾ ಮಂದಿರದಲ್ಲಿರುವ ಕನ್ಯಕಾ ಪರಮೇಶ್ವರಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ, ಹೋಮ ಅರ್ಚನೆ,ಮಹಾ ಮಂಗಳಾರತಿ ನೆರವೇರಿಸಲಾಯಿತು.
ಸ್ವತಃ ಮಹಿಳೆಯರು ಅರ್ಚನೆ ಮಾಡಿದುದು ವಿಶೇಷವಾಗಿತ್ತು,ಜತೆಗೆ ದೇವಿಗೆ ತಂಬಿಟ್ಟಿನ ಆರತಿ ಮಾಡಿ ಭಕ್ತಿ ಸಮರ್ಪಿಸಿದರು.
ಇಂದು ಬೆಳಗಿನಿಂದ ಸಂಜೆತನಕ ದೇವಿಗೆ ಪೂಜೆ ನೆರವೇರಿಸಿ,ಭಂದ ಭಕ್ತಾದಿಗಳಿಗೆಲ್ಲ ಪ್ರಸಾದ ವಿನಿಯೋಗ ಮಾಡಲಾಯಿತು.