Wed. Dec 25th, 2024

ವಿಜೃಂಬಣೆಯಿಂದ ನಡೆಯುತ್ತಿರುವಊರ ಹಬ್ಬ, ಅಣ್ಣಮ್ಮ ದೇವಿ ಉತ್ಸವ

Share this with Friends

ಬೆಂಗಳೂರು, ಮೇ.18: ಬೆಂಗಳೂರಿನ ಮಹಾಲಕ್ಷ್ಮಿಪುರಂನ ನಾಗಪುರದ 42ನೇ ಊರ ಹಬ್ಬ ಹಾಗೂ ಅಣ್ಣಮ್ಮ ದೇವಿ ಉತ್ಸವ ವಿಜೃಂಬಣೆಯಿಂದ ನಡೆಯುತ್ತಿದೆ.

ಶುಕ್ರವಾರ ಆರಂಭವಾದ ಊರ ಹಬ್ಬ ನಾಲ್ಕು ಸೋಮವಾರದವರೆಗೂ ಸಡಗರದಿಂದ ನಡೆಯಲಿದೆ ಬಡಾವಣೆಯಲ್ಲಿ ಸಂಭ್ರಮ ಮನೆ ಮಾಡಿದೆ.

ನಿನ್ನೆ ವಿಶೇಷ ಪೂಜೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಇಂದು ಕೊಂಡೋತ್ಸವ ನಡೆಯಿತು. ಸಂಜೆ ನಡೆದ ಭರತನಾಟ್ಯ ಎಲ್ಲರ ಗಮನ ಸೆಳೆಯಿತು.

ಸುರಿಯುತ್ತಿದ್ದ ಮಳೆಯ ನಡುವೆಯೂ ಕೊಂಡೋತ್ಸವ ಸುಗಮವಾಗಿ ನೆರವೇರಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು.

ನಾಳೆ ಭಾನುವಾರ ಬಲಿ ಕಾರ್ಯಕ್ರಮ ನಡೆಯಲಿದ್ದು ಭರ್ಜರಿ ಬಾಡೂಟ ಇರಲಿದೆ,
ಸೋಮುವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂಜಾ ಕುಣಿತ ಡೊಳ್ಳು ಕುಣಿತ ಮತ್ತಿತರ ಜಾನಪದ‌ ಕಲಾ ತಂಡದೊಂದಿಗೆ ಅಣ್ಣಮ್ಮ, ಶನಿದೇವ ಇತರ ದೇವರುಗಳ ಮೆರವಣಿಗೆ ನೆರವೇರಿಸಿ ನಂತರ ಅಣ್ಣಮ್ಮನನ್ನು ಮೂಲ ದೇವಸ್ಥಾನಕ್ಕೆ ಮರಳಿಸಲಾಗುವುದು.


Share this with Friends

Related Post