Wed. Dec 25th, 2024

ಸಾಂಸ್ಕೃತಿಕ ನಗರಿಯಲ್ಲಿ‌ ದೇಸಿ ಅಕ್ಕಿ ಮೇಳ

Share this with Friends

ಮೈಸೂರು,ಮೇ.19: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೇಸಿ ಅಕ್ಕಿ ಮೇಳಕ್ಕೆ‌ ಚಾಲನೆ ನೀಡಲಾಗಿದೆ.

ಮೇಳದಲ್ಲಿ ಹಲವು ಬಗೆಯ ಅಕ್ಕಿ, ಭತ್ತ, ಸಿರಿ ಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ಸಮೃದ್ದ ಸಹಜ ಸಾವಯವ ಕೃಷಿ ಬಳಗ ಮತ್ತು ಭತ್ತ ಉಳಿಸಿ ಅಭಿಯಾನದ ಸಂಯುಕ್ತಾಶ್ರಯದಲ್ಲಿ ನಗರದ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಅಕ್ಕಿ ಮೇಳ ಆಯೋಜಿಸಲಾಗಿದೆ.

ಮೇಳದಲ್ಲಿ 150 ಕ್ಕೂ ಹೆಚ್ಚು ತಳಿಯ ಭತ್ತ, 30 ಕ್ಕೂ ಹೆಚ್ಚು ಬಗೆಯ ಅಕ್ಕಿ, ಸಿರಿ ಧಾನ್ಯ, ಸಿರಿ ಧಾನ್ಯ ಉತ್ಪನ್ನಗಳ ಪ್ರದರ್ಶನ ಮಾರಾಟ ಕ್ಕಿಡಲಾಗಿದೆ.

ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಯ ಬೀಜ ಸಂರಕ್ಷಕರು ಮತ್ತು ಸಾವಯವ ಕೃಷಿ ರೈತರು ಮತ್ತು ಪ್ರಗತಿಪರ ರೈತರು ಪಾಲ್ಗೊಂಡಿದ್ದಾರೆ.

ಮಂಡ್ಯದ ಶಿವಳ್ಳಿ ರೈತ ಬೋರೇಗೌಡ ಅವರು ಸ್ವತಃ ಎರಡು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ವಿಶೇಷ.

ಅವರು ತಾವು ಅಭಿವೃದ್ಧಿ ಪಡಿಸಿರುವ ಭತ್ತದ ತಳಿಗಳಿಗೆ ತಮ್ಮ ತಂದೆ ತಾಯಿ ಹೆಸರನ್ನೇ ಇಟ್ಟಿದ್ದಾರೆ. ಸಣ್ಣ ಸಿದ್ದ ಮತ್ತು ಹೇಮಾಶ್ರೀ ಎಂದು ಭತ್ತದ ತಳಿಗೆ ಬೋರೇಗೌಡ ಹೆಸರಿಟ್ಟಿದ್ದಾರೆ.

ಹಸಿರು ಕ್ರಾಂತಿ ಬಳಿಕ ದೇಸಿಯ ತಳಿಗಳು ಕಣ್ಮರೆಯಾಗಿವೆ, ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಬೋರೇಗೌಡ ಹೇಳಿದ್ದಾರೆ.

ದೇಸೀಯ ಮೂಲ ತಳಿಗಳು ಪೋಷಕಾಂಶಗಳ ಕಣಜ,ಹಸಿರು ಕಾಂತ್ರಿಯ ವೇಳೆ ಹೈ ಬ್ರೀಡ್ ತಳಿಗಳು ಬಂದು ಅವುಗಳಲ್ಲಿ ಕಡಿಮೆ ಪೋಷಕಾಂಶವಿದೆ. ಇಂತಹ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಜನರು ಮುಂದಿನ ಪೀಳಿಗೆಗೆ ನಮ್ಮ ದೇಸಿ ತಳಿಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಸಹಜ ಸಮೃದ್ಧ ಸಾವಯವ ಕೃಷಿ ಬಳಗದ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಮೇಳದಲ್ಲಿ ಸಿರಿಧಾನ್ಯ,ತರಕಾರಿ‌ಬಿತ್ತನೆ ಬೀಜಗಳು,ಗೆಡ್ಡೆಗೆಣೆಸು ಮತ್ತು ಸಾವಯವ ಉತ್ಪನ್ನಗಳು ಹಾಗೂ ವಿಶೇಷ ತಳಿಯ ಹಲಸು,ಮಾವು ಮತ್ತಿತರ ಹಣ್ಣಿನ ಗಿಡಗಳು ಮಾರಾಟಕ್ಕಿವೆ.

ಇಂದು ರಾತ್ರಿ ಮೇಳ ಮುಕ್ತಾಯವಾಗಲಿದೆ.


Share this with Friends

Related Post