Mon. Dec 23rd, 2024

ಬಾಲ್ಯವಿವಾಹ:ಯುವಕನ ವಿರುದ್ದ ಪೋಕ್ಸೋ ಪ್ರಕರಣ

Share this with Friends

ಮೈಸೂರು,ಮೇ.20: 14 ವರ್ಷದ ಬಾಕಿಯನ್ನು ಕರೆದೊಯ್ದು ಯುವಕ ವಿವಾಹ ಮಾಡಿಕೊಂಡಿದ್ದು ಇದೀಗ ಆತನ ವಿರುದ್ಧ ಫೊಕ್ಸೊ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ಈ ಘಟನೆ ನಡೆದಿದ್ದು,
ಸುತ್ತೂರಿನ ಯಾವುದೋ ಜಾಗಕ್ಕೆ
ಕರೆದೊಯ್ದ ಯುವಕ ತಾಳಿ ಕಟ್ಟಿ ಮದುವೆ ಆಗಿದ್ದಾನೆ.

ಯುವಕನ ವಿರುದ್ದ ಬಾಲಕಿಯ ತಾಯಿ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಂಜನಗೂಡಿನ ಬದನವಾಳು ಗ್ರಾಮದ ಅರ್ಜುನ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.

ಕನಕಗಿರಿಯಲ್ಲಿರುವ ಬಾಲಕಿಯ ಮನೆಗೆ ತಂದೆ ಜೊತೆ ಬರುತ್ತಿದ್ದ ಅರ್ಜುನ್ ಪರಿಚಯವಾಗಿದ್ದಾನೆ.ಹೆತ್ತವರಿಗೆ ತಿಳಿಯದಂತೆ ಬಾಲಕಿಯನ್ನ ಮದುವೆ ಆಗುವುದಾಗಿ ನಂಬಿಸಿ ಕರೆದೊಯ್ದಿದ್ದಾನೆ.

ಮೂರು ದಿನಗಳ ನಂತರ ಮನೆಗೆ ಹಿಂದಿರುಗಿದ ಬಾಲಕಿ ಕುತ್ತಿಗೆಯಲ್ಲಿ ಅರಿಶಿನ ದಾರ ಇರುವುದನ್ನು ಕಂಡ ತಾಯಿ ಮಗಳನ್ನ ಪ್ರಶ್ನಿಸಿದ್ದಾರೆ.

ಅರ್ಜುನ್ ಕರೆದೊಯ್ದು ಮದುವೆ ಆದನೆಂದು ತಿಳಿಸಿದ್ದಾಳೆ.ಬಾಲ್ಯವಿವಾಹ ಮಾಡಿಕೊಂಡ ಅರ್ಜುನ್ ವಿರುದ್ದ ಕ್ರಮ ಕೈಗೊಳ್ಳುವಂತೆ ತಾಯಿ ದೂರು ನೀಡಿದ್ದು ಇದೀಗ ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.


Share this with Friends

Related Post