ಮುಂಬೈ : ಮುಂದಿನ ಚುನಾವಣೆಯಲ್ಲಿ ನಿಮ್ಮ ತಂದೆ – ತಾಯಿಗಳು ನನಗೆ ಮತ ಹಾಕದಿದ್ದರೆ, ಎರಡು ದಿನ ನೀವು ಊಟ ಮಾಡಬೇಡಿ ಎಂದು ಮಕ್ಕಳಿಗೆ ಶಾಸಕರೊಬ್ಬರು ಹೇಳಿರುವುದು ಈಗ ವಿವಾದ ಸೃಷ್ಟಿಸಿದೆ.
ಶಾಲೆಯೊಂದರಲ್ಲಿ ಮಕ್ಕಳಿಗೆ ಸಂತೋಷ್ ಬಂಗಾರ್ ಊಟ ಬಿಡುವಂತೆ ಕರೆ ನೀಡಿರುವ ವಿಡಿಯೋ ಈಗ ವೈರಲ್ ಆಗಿದೆ. ಅದಲ್ಲದೇ ಮಕ್ಕಳಿಗೆ ತಮ್ಮ ತಂದೆ – ತಾಯಿ ಮುಂದೆ ಬರುವ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂಬುದನ್ನು ಶಾಸಕರು ಹೇಳಿಕೊಟ್ಟಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಘಟನೆ ನಡೆಯುವ ಕೆಲವೇ ದಿನಗಳ ಮುಂಚೆ ಮಕ್ಕಳನ್ನು ಚುನಾವಣೆ ಸಂಬಂಧಿ ಕೆಲಸಗಳಿಗೆ ಬಳಸಿಕೊಳ್ಳಬಾರದು ಎಂದು ನಿಯಮ ಹೊರಡಿಸಿತ್ತು.ಶಾಸಕ ಸಂತೋಷ್ ಬಂಗಾರ್‌ಗೆ ಮತ ಹಾಕಿ ಎಂದು ನಿಮ್ಮ ತಂದೆ – ತಾಯಿಗೆ ಹೇಳಿ. ಇಲ್ಲದಿದ್ದರೇ ಎರಡು ದಿನ ಊಟ ಮಾಡಬೇಡಿ. ನೀವು ಊಟ ಮಾಡದಿದ್ದಾಗ ನಿಮ್ಮ ಪೋಷಕರು ನಿಮ್ಮನ್ನು ಯಾಕೆ ಊಟ ಮಾಡ್ತಿಲ್ಲ ಎಂದು ಕೇಳುತ್ತಾರೆ. ಆಗ ಅವರಿಗೆ ಶಾಸಕ ಸಂತೋಷ್ ಬಂಗಾರ್‌ಗೆ ವೋಟ್ ಹಾಕಿ ಎಂದು ಹೇಳಿ, ಆಮೇಲೆ ಊಟ ಮಾಡಿ ಎಂದು ಮಕ್ಕಳಿಗೆ ಶಿವಸೇನೆ ಶಾಸಕ ಹೇಳಿದ್ದಾರೆ. ಇನ್ನು, ಶಾಸಕ ಮಾತನಾಡುತ್ತಿರುವಾಗ ಶಾಲಾ ಸಿಬ್ಬಂದಿ, ಶಿಕ್ಷಕರು ಹಾಗೂ ಸಾಮಾಜಿಕ ಕಾರ್ಯಕರ್ತರು ನಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಭಾರತದಲ್ಲಿ ದೇಶದಲ್ಲಿ ಚುನಾವಣೆ ಸಂಬಂಧಿತ ಚಟುವಟಿಕೆಗಳಿಗೆ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಶಾಸಕರೊಬ್ಬರು ನೇರವಾಗಿ ಮಕ್ಕಳನ್ನು ಚುನಾವಣೆಯಲ್ಲಿ ಪಾಲುದಾರರನ್ನಾಗಿ ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.
ಅಮಿತ್ ಶಾ ಮೈಸೂರು ಭೇಟಿ ಖಂಡಿಸಿ ಕಾಂಗ್ರೆಸ್ ಪಾಂಪ್ಲೆಟ್ ಚಳವಳಿ