Tue. Dec 24th, 2024

ಕಿರು ಅವಧಿಯಲ್ಲಿ ಜನ ಮನ್ನಣೆ ಗಳಿಸಿದ ಕಾಂಗ್ರೆಸ್ ಸರ್ಕಾರ: ಆರ್. ಮೂರ್ತಿ

Share this with Friends

ಮೈಸೂರು, ಮೇ.20: ಕಾಂಗ್ರೆಸ್ ಸರ್ಕಾರ ಅಪೂರ್ವ ಸಾಧನೆ ಮಾಡಿದ್ದು ಅತ್ಯಂತ ಕಿರು ಅವಧಿಯಲ್ಲಿ ಅಗಣಿತವಾಗಿ ಜನ ಮಣ್ಣನೆ ಗಳಿಸಿದೆ ಎಂದು ಕಾಂಗ್ರೆಸ್ ನಗರ ಅಧ್ಯಕ್ಷ ಆರ್ ಮೂರ್ತಿ ತಿಳಿಸಿದರು.

ನಗರದ ನಂಜು ಮಳಿಗೆ ವೃತ್ತದಲ್ಲಿ ಡಾಕ್ಟರ್ ಯತೀಂದ್ರ ಯುವ ಬ್ರಿಗೇಡ್ ಹಾಗೂ ಕೃಷ್ಣರಾಜ ಯುವ ಬಳಗದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರಿಬ್ಬರ ಭಾವಚಿತ್ರ ಹಿಡಿದು ಕಾಂಗ್ರೆಸ್ ಗ್ಯಾರಂಟಿ ಸರ್ಕಾರ ಎಂದು ಘೋಷಣೆ ಕೂಗಿ ಸಿಹಿ ವಿತರಿಸಿ ಸಂಭ್ರಮಿಸಿದ ವೇಳೆ ಮೂರ್ತಿ ಮಾತನಾಡಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಇಂದಿಗೆ ಸ್ಥಾಪನೆಗೊಂಡು ಒಂದು ವರ್ಷ ಪೂರೈಸಿದೆ ಈ ಅವಧಿಯಲ್ಲಿ ಯಾವುದೇ ಜಾತಿ ಧರ್ಮ ಎನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುವ ತತ್ವ ಪಾಲಿಸಿಕೊಂಡು ಬರುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ 4.60 ಕೋಟಿ ಜನರನ್ನು ತಲುಪುತ್ತಿದೆ, ಬಡವರು ಮಹಿಳೆಯರು ರೈತರು ಸೇರಿದಂತೆ ಶ್ರಮಿಕ ವರ್ಗದವರನ್ನು ಸಹ ಆರ್ಥಿಕವಾಗಿ ಸಶಕ್ತನಾಗಿರಿಸಿದ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ದೇಶದಲ್ಲಿ, ಅಷ್ಟೇ ಯಾಕೆ ವಿಶ್ವದಲ್ಲಿ ಮಾದರಿಯಾಗಿದೆ ಎಂದು ಅವರು ತಿಳಿಸಿದರು

ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜಿ ರಾಘವೇಂದ್ರ, ಡಾಕ್ಟರ್ ಯತೀಂದ್ರ ಯುವ ಬ್ರಿಗೇಡ್ ಅಧ್ಯಕ್ಷರಾದ ಶಿವಕುಮಾರ್, ಲೋಕೇಶ್, ರವಿಚಂದ್ರ, ಎಸ್ ಎನ್ ರಾಜೇಶ್, ತೀರ್ಥ ಕುಮಾರ್,ಬ್ರೆಡ್ ವೇ ಕಿರಣ್, ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post