Wed. Dec 25th, 2024

ಮೋದಿ ಪರ ಕರ್ನಟಕದವರಿಂದ ಮತಯಾಚನೆ

Share this with Friends

ಮೈಸೂರು, ಮೇ.20: ವಾರಣಾಸಿ ಲೋಕಸಭಾ ಕ್ಷೇತ್ರದ ಕಾಶಿಯ ಹನುಮಾನ್ ಘಾಟ್ ಪ್ರದೇಶದಲ್ಲಿ ನರೇಂದ್ರ ಮೋದಿ ಪರ ಕರ್ನಾಟಕದ ಕೆಲ ಮಂದಿ ಮತಯಾಚನೆ ಮಾಡಿದ್ದಾರೆ.

ಸ್ಥಳೀಯ ಬೂತ್ ಅಧ್ಯಕ್ಷ ರಾಜೇಶ್ ಅವರ ಜೊತೆ ಮಾಜಿ ಸಚಿವ ಎಸ್. ಎ ರಾಮದಾಸ್, ಹುಬ್ಬಳ್ಳಿ ಶಾಸಕ ಮಹೇಶ್ ಟೆಂಗಿನ ಕಾಯಿ, ಉಡುಪಿ ಶಾಸಕ ಸುವರ್ಣ, ವಿಧಾನಪರಿಷತ್ ಸದಸ್ಯರುಗಳಾದ ಕೇಶವ್ ಪ್ರಸಾದ್, ನವೀನ್ ಅವರುಗಳು ಕನ್ನಡಿಗರು ಇರುವ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಕುಶಲೋಪರಿ ವಿಚಾರಿಸಿ ಮತಯಾಚನೆ ಮಾಡಿ ಬಂದಿದ್ದಾರೆ.

ಇದೇ ಸಂದರ್ಭದಲ್ಲಿ ಕಾಶಿ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸುವ ಶ್ರೀನಿವಾಸ ಮೂರ್ತಿ ಹಾಗೂ ಆದಿತ್ಯ ಅವರ ಮನೆಗಳಿಗೆ ಭೇಟಿ ನೀಡಿ,ಸ್ಥಳೀಯ ಲೋಕಸಭಾ ಸದಸ್ಯರು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿರುವ ಕ್ಯಾಲೆಂಡರ್ ಗಳು ಹಾಗೂ ಬಿತ್ತಿ ಪತ್ರಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯರು ಮಾತನಾಡಿ,ಕಾಶಿಯಲ್ಲಿ ಬಹಳ ವರ್ಷಗಳಿಂದ ಇದ್ದ ವಿದ್ಯುತ್,ಕುಡಿಯುವ ನೀರು, ರಸ್ತೆಗಳ ಸಮಸ್ಯೆಗಳನ್ನು ಪರಿಹರಿಸಿ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಮಾಡಿರುವುದರಿಂದ ಸ್ಥಳೀಯ ವ್ಯಾಪಾರ, ಉತ್ಪತ್ತಿಯಲ್ಲಿ ಬೆಳವಣಿಗೆಯಾಗಿದೆ ಎಂದು ಸ್ಥಳೀಯ ಜನರು ಮೆಚ್ಚುಗೆ ವ್ಯಕ್ತಪಡಿಸಿ,ಈ ಬಾರಿ ಕೂಡಾ ಅತ್ಯಧಿಕ ಮತಗಳಿಂದ ನರೇಂದ್ರ ಮೋದಿ ಗೆಲ್ಲುತ್ತಾರೆ ಎಂದು ವಿಶ್ವಾಸದಿಂದ ಹೇಳಿದ್ದಾರೆ.


Share this with Friends

Related Post