Mon. Dec 23rd, 2024

ಪಿಕೆಪಿಎಸ್ ಬ್ಯಾಂಕ್ ದೊಚಿದ್ದ ಮೂವರು ದರೋಡೆಕೋರರು ಅರೆಸ್ಟ್:2.20ಕೋಟಿ ವಶ

Share this with Friends

(ವರದಿ: ವಿಕಿಲ್ ಎಸ್ ಹಿರೇಮಠ)

ವಿಜಯಪುರ,(ಸಿಂದಗಿ)ಫೆ.11: ಇಂಡಿ ಪಟ್ಟಣದ ಪಿಕೆಪಿಎಸ್ ಬ್ಯಾಂಕ್‌ ದೋಚಿದ್ದ ದರೋಡೆಕೋರರನ್ನು ಬಂಧಿಸುವಲ್ಲಿ ಸಿಂದಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಭು ಶಿವಪ್ಪ ಹಲಗಿ (32 ),ಅನಿಲ‌ ಸುರೇಶ ನಾಯ್ಕೋಡಿ (32),ಬಸವರಾಜ ಲಕ್ಷ್ಮಣ ಮಾದರ(28) ಬಂಧಿತ ಆರೋಪಿಗಳು.

ಇತ್ತೀಚಿಗೆ ಸಿಂದಗಿ ಪಟ್ಟಣದಲ್ಲಿರುವ ಅನ್ನಪೂರ್ಣ ಫೈನಾನ್ಸ್, ಎಲ್ ಆ್ಯಂಡ್ ಟಿ ಫೈನಾನ್ಸ್, ಇಂಡಿ ಪಟ್ಟಣದ ಪಿಕೆಪಿಎಸ್ ಬ್ಯಾಂಕ್ ಗಳಲ್ಲಿ ದರೋಡೆಕೋರರು ಕೈಚಳಕ ತೋರಿಸಿ ಲಕ್ಷಾಂತರ ರೂ ದೋಚಿದ್ದರು.

ಪ್ರಕರಣವನ್ನ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣೆ, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ಪೊಲೀಸ್ ಉಪಾಧೀಕ್ಷಕ ಜಗದೀಶ್ ಎಚ್.ಎಸ್ ಗಂಭೀರವಾಗಿ ಪರಿಗಣಿಸಿದರು.

ಈ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಂದಗಿ ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ ಹಾಗೂ ಪಿಎಸ್ ಐ ಭೀಮಪ್ಪ ರಬಕವಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.

ಈ ತಂಡ ತನಿಖೆ‌ ತೀವ್ರಗೊಳಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಂದಗಿ ಆಲಮೇಲ ರಸ್ತೆಯಲ್ಲಿರುವ ಢಾಲಫಿನ್ ದಾಬ್ ಹತ್ತಿರ ತನಿಖಾ ತಂಡ ವಾಹನ ತಪಾಸಣೆ ನಡೆಸುವಾಗ ಈ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಹಾಗೂ 2,20,000,00 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಪ್ರಕರಣದ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪೊಲೀಸ್ ಜಿಲ್ಲಾ ಅಧೀಕ್ಷಕ‌ ಋಷಿಕೇಶ‌ ಸೋನಾವಣೆ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.


Share this with Friends

Related Post