Mon. Dec 23rd, 2024

ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ದಾರುಣ ಸಾವು

Share this with Friends

ಮೈಸೂರು, ಮೇ.22: ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟಿರುವ ದಾರುಣ ರ್ಘಟನೆ ಸಾಂಸ್ಕೃತಿಕ ‌ನಗರಿ ಮೈಸೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಖರಾಯಪಟ್ಟಣದ ನಿವಾಸಿಗಳಾದ ಕುಮಾರಸ್ವಾಮಿ(45), ಪತ್ನಿ ಮಂಜುಳ(39) ಮಕ್ಕಳಾದ ಅರ್ಚನಾ(19), ಸ್ವಾತಿ(17) ಮೃತಪಟ್ಟಿರುವ ದುರ್ದೈವಿಗಳು.

ಸಂಬಂಧಿಕರ ವಿವಾಹ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬಂದಿದ್ದರು.
ಯರಗನಹಳ್ಳಿಯ ಶನೈಶ್ಚರ ಸ್ವಾಮಿ ದೇವಸ್ಥಾನದ ಸಮೀಪ ಇರುವ ಮನೆಯಲ್ಲಿ ಅನಿಲ ಸೋರಿಕೆಯಿಂದ ಈ ನಾಲ್ವರು ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ‌ ಚಿಕ್ಕದಾಗಿದ್ದು,ಒಂದೇ ಒಂದು ಕಿಟಕಿ ಬಿಟ್ಟರೆ ಗಾಳಿ ಹೊರ ಹೋಗಲು ಬೇರೆ ದಾರಿ ಇರಲಿಲ್ಲ, ಹಾಗಾಗಿ ಅನಿಲ ಸೋರಿ ಉಸಿರುಗಟ್ಟಿ ನಾಲ್ವರೂ ಮೃತಪಟ್ಟಿದ್ದಾರೆ.

ಆಲನಹಳ್ಳಿ ಪೊಲೀಸರು ಸ್ಳಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post