ಮೈಸೂರು, ಮೇ.22: ಮೈಸೂರು ಅಭಿವೃದ್ಧಿ ಗೆ ಸಿದ್ದರಾಮಯ್ಯ ಕೊಡುಗೆ ಏನಿದೆ ಹೇಳಲಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್ ಡಿ ಕೆ,ಸಿಎಂ ರಾಜಕೀಯದ ಕೊನೆ ಹಂತದಲ್ಲಿದ್ದಾರೆ, ಈಗಾ ಮೈಸೂರು ಜಿಲ್ಲೆ ಅಭಿವೃದ್ಧಿ ಮಾಡಲಿ ಅಭಿವೃದ್ಧಿ ವಿಚಾರದಲ್ಲಿ ನಮ್ಮನ್ನು ಟೀಕೆ ಮಾಡುವ ನೈತಿಕತೆ ಅವರಿಗೆ ಇಲ್ಲ ಎಂದು ತಿರುಗೇಟು ನೀಡಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಲುಷಿತ ನೀರು ಕುಡಿದು ಒಬ್ಬ ಮೃತಪಟ್ಟಿದ್ದಾನೆ. ನಾಲ್ಕು ಬಾರಿ ಈ ಕ್ಷೇತ್ರ ಪ್ರತಿನಿಧಿಸಿರುವ ಸಿದ್ದರಾಮಯ್ಯ ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದು ಇದರಲ್ಲೆ ಗೊತ್ತಾಗುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ರಾಜ್ಯದ ಹಲವೆಡೆ ಬೆಳೆ ನಾಶವಾಗಿದೆ,ಆದರೆ ಈ ಸರಕಾರ ಹೇಳಿಕೆಗಳಿಗೆ ಮಾತ್ರ ಸಿಮೀತವಾಗಿದೆ, ರೈತರ ಆತ್ಮಹತ್ಯೆ ಆಗುತ್ತಿವೆ ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳುವ ಕೆಲಸವನ್ನ ಸರ್ಕಾರದವರು ಮಾಡಲೇ ಇಲ್ಲ ಎಂದು ಕಿಡಿಕಾರಿದರು.
ನನಗೆ ಡಿ.ಕೆ ಶಿವಕುಮಾರ್ ಕಂಡರೆ ಅಸೂಯೆ ಎಂದಿದ್ದಾರೆ, ನಾನೇಕೆ ಅವರನ್ನು ನೋಡಿ ಅಸೂಯೆ ಪಡಲಿ, ವೀಡಿಯೋ ಮಾಡಿರುವುದು ಒಂದು ಭಾಗ ವೀಡಿಯೋ ವನ್ನು ಚುನಾವಣೆಗಾಗಿ ವಿತರಿಸಿದ್ದು ಅಪರಾಧ ಅಲ್ಲವೆ, ವೀಡಿಯೋ ಮಾಡಿದ್ದಕ್ಕಿಂತ ಅದನ್ನ ವಿತರಣೆ ಮಾಡಿರುವುದು ಅಪರಾಧ ಅಲ್ಲವೆ ಎಂದು ಕುಮಾರಸ್ವಾಮಿ ಕಾರವಾಗಿ ಪ್ರಶ್ನಿಸಿದರು.
ಅಧಿಕಾರ ಯಾರ ಅಪ್ಪನ ಆಸ್ತಿಯಲ್ಲ, ರಾಜಕೀಯದಲ್ಲಿ ಏಳು ಬೀಳು ಎಲ್ಲಾ ಭಗವಂತ ಇಚ್ಚೆ ಇದರಲ್ಲಿ ಅಸೂಯೆ ಯಾಕೆ ಪಡಬೇಕು ಎಂದರು.
ಪೆನ್ ಡ್ರೈವ್ ಮೂಲ ಕಾರ್ತಿಕ್ ಎಂದು ಆರೋಪಿಸಿದ ಹೆಚ್ ಡಿ ಕೆ, ಕಾರ್ತಿಕ್ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಇಟ್ಟುಕೊಂಡು ಡಿ.ಕೆ ಸುರೇಶ್ ಬಳಿಗೆ ಮೊದಲು ಹೋಗಿದ್ದ, ನಂತರ ಅದನ್ನು ಸಿಡಿ ಶಿವಕುಮಾರ್ ಕಾಪಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ನಾನು ಖಂಡಿತಾ ಪ್ರಜ್ವಲ್ ಪರವಾಗಿ ಇಲ್ಲ ಆತನ ಅಪರಾಧ ಸಾಬೀತಾದರೆ ಶಿಕ್ಷೆ ಕೊಡಲಿ ಎಂದು ಮಾಜಿ ಸಿಎಂ ತಿಳಿಸಿದರು.
ದೇವರಾಜೇಗೌಡ, ಶಿವರಾಮೇಗೌಡ, ಡಿ.ಕೆ ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದೆ ಇದ್ದಾರೆ, ಈಗ ಎಂಟು ಜನ ಪೊಲೀಸರ ರಕ್ಷಣೆಯಲ್ಲಿ ಕಾರ್ತಿಕ್ ಇದ್ದಾನೆ, ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧನ ಮಾಡಿಲ್ಲಾ, ಕೋರ್ಟ್ ಗೆ ಹಾಜರು ಪಡಿಸಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ನನ್ನ ಬಳಿ ಇರುವ ಪೆನ್ ಡ್ರೈವ್ ನಿಮ್ಮ ಸರಕಾರದ ವರ್ಗಾವಣೆಯ ಭ್ರಷ್ಟಾಚಾರದ್ದು ಅದನ್ನು ನಾನು ಈಗ ಬಿಟ್ಟರೆ ಅದು ನನ್ನದೇ ಸೃಷ್ಟಿ ಅಂತಾ ಬೇಕಾದರೆ ನೀವು ಹೇಳುತ್ತೀರ ಎಂದು ಕಾಂಗ್ರೆಸ್ ನವರಿಗೆ ಟಾಂಗ್ ನೀಡಿದರು.
ಫೋನ್ ಟ್ಯಾಪ್ ಮಾಡೋಕೆ ಅವರೇನು ಟೆರರಿಸ್ಟಾ ಅಂತಾ ಕೆಲವರು ಕೇಳಿದ್ದಾರೆ, ಅವರ ಬಳಿ ಇರೋರೆಲ್ಲಾ ಟೆರರಿಸ್ಟ್ ಗಳೇ ಬಹಳಷ್ಟು ಟೆರರಿಸ್ಟ್ ಗಳು ಇವರಗಳ ಸುತ್ತಮುತ್ತವೇ ಇದ್ದಾರೆ ಎಂದು ಕುಮಾರಸ್ವಾಮಿ ಗಂಭೀರವಾಗಿ ದೂರಿದರು.
ನೈತಿಕ ಕತೆ ಉಳಿಸಿಕೊಳ್ಳಲು ದೇಶಕ್ಕೆ ವಾಪಾಸ್ ಬಾರಪ್ಪಾ ಪ್ರಜ್ವಲ್ ಎಂದು ಇದೇ ವೇಳೆ ಹೆಚ್ ಡಿಕೆ ಕರೆ ನೀಡಿದರು.
ಈ ವಿಚಾರದಲ್ಲಿ ವಕೀಲರ ಸಲಹೆ ಬೇಡ, ನೈತಿಕ ಕತೆ ಉಳಿಸಿಕೊಳ್ಳಲು ದೇಶಕ್ಕೆ ವಾಪಾಸ್ ಬಾ ಎಂದು ತಿಳಿಸಿದರು.
ಪ್ರಜ್ವಲ್ ಭಯ ಬಿದ್ದಿರಬಹುದು ಅದಕ್ಕೆ ವಾಪಸಾಗಿಲ್ಲ,ಆತ ವಿದೇಶಕ್ಕೆ ಹೋಗೋದು ಗೊತ್ತಾಗಿದ್ದರೆ ನಾನು ಅವತ್ತೆ ಅದನ್ನು ನಿಲ್ಲಿಸುತ್ತಿದೆ ಎಂದು ಹೇಳಿದರು ಕುಮಾರಸ್ವಾಮಿ
ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಾಗಲೇ ನನ್ನ ಸಂಪರ್ಕದಲ್ಲಿ ಇರ್ತಾ ಇರಲಿಲ್ಲ ಇನ್ನು ಈಗ ಇರ್ತಾನಾ ಎಂದು ಮರು ಪ್ರಶ್ನಿಸಿದರು.
ಪೆನ್ ಡ್ರೈವ್ ಪ್ರಕರಣದಿಂದ ದೇವೇಗೌಡರ ಫ್ಯಾಮಿಲಿ ಗೆ ಸ್ವಲ್ಪ ಡ್ಯಾಮೆಜ್ ಆಗಿರೋದು ನಿಜ, ಆದರೆ ಬಿಜೆಪಿ – ಜೆಡಿಎಸ್ ಮೈತ್ರಿಗೂ ಪೆನ್ ಡ್ರೈ ಗೂ ಸಂಬಂಧ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಈಗ ಸಿಎಂ ಪೆನ್ ಡ್ರೈವ್ ಬಗ್ಗೆ ಯಾರೂ ಮಾತನಾಡಬೇಡಿ ಅಂದಿದ್ದಾರೆ,ಏಕೆಂದರೆ ಆ ಪ್ರಕರಣ ಅವತ ಬುಡಕ್ಕೆ ಬರುತ್ತಿದೆಯಲ್ಲಾ ಅದಕ್ಕೆ ಎಂದು ಹೆಚ್ ಡಿಕೆ ಟಾಂಗ್ ಕೊಟ್ಟರು.